...

7 views

ನೀಲಾಕಾಶ
ನೀಲಿಯಾ ಬಾನಿನಲಿ
ಬಣ್ಣದ ಬುಗುರಿಯಾ
ಆಡಿಸುವರಾರು ಹೇಳೆ ಸಖಿ...
ಆ ಬಾನ ತುದಿಯಲಿ
ಈ ಬಾನ ತುದಿಯಲಿ
ಬಣ್ಣದ ಬಟ್ಟಲು ಚೆಲ್ಲುವರಾರು
ಗೊತ್ತೇನು ಸಖಿ....
ಮುಗಿಲ ಒಡಲಲಿ
ಹೊನ್ನ ಕುಂದಣವಿಟ್ಟು
ಕಣ್ಣೀಗಾನಂದ ನೀಡುವರಾರು
ನೀ ನೋಡಿದೆಯಾ ಸಖಿ...
ಸಂಜೆಗೆಂಪಿನಲಿ ಬಾನ ಅಂಗಳದಿ
ಚಿತ್ತಾರ ಇಟ್ಟು
ಚಿತ್ತ ಕೆಡಿಸುವರಾರು ಕೇಳು ಸಖಿ...
ಗೋಧೂಳಿ ಕಾಲದಲಿ
ದೇವಗಂಧರ್ವರು
ನಿಂತಂತೆ ಕಾಣುವುದು ನೀ
ನೋಡೆ ಸಖಿ....
ನೀಲಾಕಾಶದಲಿ
ಹೀಗೊಂದು ಭ್ರಮೆ ಮೂಡಿ
ಗೀಚಿದ ಸಾಲುಗಳು
ಸರಿಯೇನು ನೀ ಹೇಳು ಸಖಿ. ...