...

16 views

ಸ್ವಸ್ತಿಕ್... ನಾಲ್ಕು ಯುಗಗಳ ಸಂಕೇತ
ಸತ್ಯಯುಗ, ತ್ರೇತಾಯುಗ,
ದ್ವಾಪರಯುಗ, ಕಲಿಯುಗ,
ಹೀಗೆ ಒಂದು ಯುಗವು ಉರುಳಿ,
ಮತ್ತೊಂದು ಯುಗವು ಸುಳಿಯುವುದು
ಅನಾದಿಯಾಗಿ ಸುತ್ತುವ ಕಾಲಚಕ್ರದೊಳು.

ಬೇಹದ್ದಿನ ಅವಿನಾಶಿ ಸೃಷ್ಟಿ ನಾಟಕದ ಚಕ್ರವು ಮುಂದೆ ಮುಂದೆ ಸಾಗುತ್ತಲೇ ಇರುವುದು,
ಆದಿ ಅಂತ್ಯವಿಲ್ಲದ
ಅನಂತ ಕಾಲದ ನಿಯಮದಂತೆ.

ಮನ್ವಂತರ ಕಾಲದಲ್ಲಿ,
ಒಂದು ಯುಗದ ಪರಿವರ್ತನೆಯಾಗಿ
ಹೊಸ ಯುಗದ ಆಗಮನ ಆಗುವುದು.
*ಸ್ವಸ್ತಿಕ್* ಚಿಹ್ನೆಯು,
ಅನಾದಿಯಾಗಿ ಸುತ್ತುವ ಕಾಲಚಕ್ರದಲ್ಲಿ,
ಒಂದು ಸೃಷ್ಟಿ ನಾಟಕದ ಕಾಲಚಕ್ರದ ಅಥವಾ *ಕಲ್ಪ* (೫೦೦೦ ವರ್ಷಗಳು)ದಲ್ಲಿನ,
ನಾಲ್ಕು ಯುಗಗಳ ಸಂಕೇತ.
|,,,,|''''"
,,,,,|'''''|
ಈಗ ನಾವು ಬಂದು ನಿಂತಿರುವುದು,
ಕಲಿಯುಗದ ಅಂತಿಮ ಸಮಯದಲ್ಲಿ.
ಕಲಿಯುಗದ ವಿನಾಶ,
ಸತ್ಯಯುಗದ ಸ್ಥಾಪನೆಯ ಕಾರ್ಯ ನಡೆಯುತ್ತಿರುವ ಸಮಯದಲ್ಲಿ.
ಮಹಾ ಪರಿವರ್ತನೆಯ ಸಮಯದಲ್ಲಿ.
ಕಲಿಯುಗ ಮತ್ತು ಸತ್ಯಯುಗ ಕೂಡುವ ಸಮಯದ ಸಂಧಿಕಾಲದಲ್ಲಿ.
ಅರ್ಥಾತ್,...ಕಲ್ಯಾಣಕಾರಿ ಪುರುಷೋತ್ತಮ ಸಂಗಮಯುಗ, ಸಂಗಮ ಕಾಲದಲ್ಲಿ.

ರಾತ್ರಿ ಕಳೆದು, ದಿನವು ಶುರುವಾಗುವ ಸಂಧಿಕಾಲ,
*ನಸುಕು, ಅಮೃತ ವೇಳೆ, ಬ್ರಾಹ್ಮೀ ಮುಹೂರ್ತ*
ಎಂಬ ಸಮಯದಂತೆ,
ಕಲಿಯುಗ ಮತ್ತು ಸತ್ಯಯುಗ ಸೇರುವ ಸಮಯ
ಕಲಿಯುಗದ ವಿನಾಶ ಮತ್ತು ಸತ್ಯಯುಗದ ಸ್ಥಾಪನೆಯ ಕಾರ್ಯಗಳು, ಗುಪ್ತವಾಗಿ ಒಟ್ಟೊಟ್ಟಿಗೇ ನಡೆಯುತ್ತಿರುವ ಸಮಯ.
ಕಲಿಯುಗದ ಸಂಪೂರ್ಣ ವಿನಾಶ ದೂರವಿಲ್ಲ.
ಅದರ ರಿಹರ್ಸಲ್ ಅಲ್ಲಲ್ಲಿ ಶುರುವಾಗಿದೆ.

ಪ್ರಾಕೃತಿಕ ವಿಕೋಪಗಳು,
ಯುದ್ಧ ಕಲಹಗಳು, ಕೋಮುಗಲಭೆಗಳು, ಕಂಡೂಕೇಳಲರಿಯದ ರೋಗ ರುಜಿನಗಳು, ಕೌಟುಂಬಿಕ ಸಂಬಂಧಗಳ ಬಿರುಕುಗಳು,
ಮೋಸ ವಂಚನೆಯ ಪರಾಕಾಷ್ಠೆಯು,
ವಿಕಾರ, ವಿಕಲ್ಪ,
ವಿಕರ್ಮ, ವಿಸ್ಮೃತಿ ಎಂಬ ವಿಷಗಳು
ಕಲಿಯುಗದ ವಿನಾಶದ ನಿಮಿತ್ಯಗಳು.
ಇನ್ನೊಂದೆಡೆ,..
ಈಶ್ವರೀಯ ಆಧ್ಯಾತ್ಮಿಕ ಜ್ಞಾನ
ಮತ್ತು ಸನಾತನ ಧರ್ಮದ ಅರಿವು,
ಸತ್ಯಯುಗದ ಸ್ಥಾಪನೆಯ ಕಾರ್ಯಕ್ಕೆ ಸಹಯೋಗಿಗಳು.

© Vanishri Patil