...

11 views

ಶೀರ್ಷಿಕೆ:*ಅನಾಥನೆಂಬ ಭಾವವು*
ದುಗುಡವೆನಗೆ ಮನದ ಮಾತುಗಳ ಹೇಳಲು
ಬೆಂಬಿಡದೆ ಕಾಡುತ್ತಿರುವ ಪ್ರಶ್ನೆಯ ಸುರಿಮಳೆಗಳು
ಅನಾಥನೆಂಬ ಭಾವವು ಕಾಡುತ್ತಲಿದೆ ಪರಿಪರಿಯಾಗಿ
ಅರಿಯೆನು ಯಾರು ಹೆತ್ತರೋ ಈ ನತದೃಷ್ಟನನ್ನು

ಕಂಡಿಲ್ಲ ಯಾವುದೇ ಪ್ರೀತಿ ವಾತ್ಸಲ್ಯ,ಕಾಳಜಿಯ
ಹರಿದ ಬಟ್ಟೆಯೊಳು ತೇಪೆ ಕಟ್ಟುತ್ತಾ ಬದುಕುತ್ತಿರುವೆ
ಚಳಿಯೊಳು ಒದ್ದಾಡಿದರೂ ಹೊದ್ದುಮಲಗಲೇನಿಲ್ಲ
ಓಡುತಲಿ ಬಿದ್ದರೂ ಎತ್ತಿ ಎನ್ನ ಮುದ್ದಿಸುವವರಿಲ್ಲ

ಯಾವ ಕಾರಣಕ್ಕಾಗಿ ಬೀದಿಗೆಸೆದರೋ ನಾನರಿಯೇ
ಕಳ್ಳಾಟಕ್ಕೋ ಅಥವಾ ಯಾರಾದರು ಏನಾದರು ಹೇಳುವರೆಂದೋ
ತಪ್ಪೇ ಮಾಡದೆನಗೇಕೆ ಇಂತಹ ಕಠಿಣ ಭಾರವು
ಮುಗಿಯದ ಮನದ ಸಂಕಟಗಳ ಹೇಳಲಿ ಹೇಗೆ

ಹಸಿವಾಯಿತೆಂದು ಚೀರಿದರೂ ಬಂದಿಕ್ಕುವವರಿಲ್ಲ
ಕೊಟ್ಟ ಕೊಂಚ ಊಟವೇ ಪರಮಾನ್ನವೆಂದರಿಯಬೇಕು
ದಾನಿಗಳಿಂದ ಸಿಕ್ಕ ಉಡುಪುಗಳೇ ಮೈಮುಚ್ಚಲು
ಕತ್ತಲರಾತ್ರಿಯೊಳು ಹುಡುಕಿದರೂ‌ ಸಿಗದ ಪ್ರೇಮ

ನವಮಾಸ ಹೊತ್ತ ಈ ಕರುಳಬಳ್ಳಿಯ ನೆನಪಾಗದೆ
ದಾರಿಯೊಳು ಬಿಟ್ಟು ನಡೆಯಲು ಹೇಗೆ ಮನಸಾಯಿತು
ಆಳುವ ಕೂಗು ಕೇಳದಂತೆ ಬಿಟ್ಟುನಡೆದೆಯಾ ಅವ್ವ
ನನ್ನ ಭವಿಷ್ಯ ಏನಾಗಬಹುದೆಂದು ಯೋಚಿಸಲಿಲ್ಲವೇ

ಸುಮನ.ಜಿ.ಕಾರಂತ್
ಮೂಡಬಿದ್ರೆ