...

6 views

ಇಳೆಯ ಬೆಳಗು

ಇಳಿದು ಬಾ ಬೆಳಗೆ
ಇಳಿದು ಬಾ ಇಳೆಗೆ
ಕಳೆಕಳೆಯಾಗಿ ನೀ
ಆವರಿಸು ಬಾ.....
ಹಸಿರೆಲೆಗೆ ಉಸಿರಾಗಿ
ಮೊಗ್ಗಿಗೆ ಕನಸಾಗಿ
ಹೂವಾಗಿ ಅರಳಿಸಿ
ನನಸಾಗಿ ಬಾ
ಬಾ ಬೆಳಗೆ ಬಾ.....
ಸುರಿವ ಇಬ್ಬನಿಯ
ಹನಿಯಾಗು ಬಾ
ಹನಿಮುತ್ತು ಕಟ್ಟಿ
ಹಾರವಾಗಿ ಬಾ
ಬಾ...