...

27 views

ಏಕಾಂತದ ಸಂಜೆಯಲಿ..

ಏಕಾಂತದ ಸಂಜೆಯಲಿ

ಮೌನದ ಆಳ ಕಡಲ ಸೇರಿತು
ಕವಿತೆಯ ಕಣ್ಣಲಿ ಬರಗಾಲದ
ನೋವ ತಂದಿತು..
ಒಣಗಿದ ಮರದಂತೆ, ಬತ್ತಿದ
ಬನದಲಿ ಚಿಗುರು
ನಶಿಸಿಹೋಗಿತ್ತು..
ಲತೆಗಳೆಲ್ಲಾ ಬಿಕ್ಕುತಿತ್ತು
ಮಳೆಯಿಲ್ಲದ ದಿನವ
ಶಪಿಸುತ..
ಬಿಸಿಲಿಗೆ ನಿಂದಿಸುತ..!
ಅದೊಂದು ಕವಿತೆಯ ಸಾಲಿಗಾಗಿ
ನಿತ್ಯವು ಕಾತುರದಿ ಕಾದಿತ್ತು..
ಕವಿಗೂ ಬೇಸರ ಹಸಿರ ಸಿರಿಯ
ಕಾಣದೆ ಬಣಗುಡುತ್ತಿದೆ ಎಂದು
ಬರಹದಿ ಚಿಗುರಿಸಿದೆಯೆಂದು
ಖುಷಿಯ ಕಂಡಿತು..
ಮೋಡ ಕರಗೆಂದು ಬೇಡಿಕೆ ಇಟ್ಟಿದ್ದೇ...
ಕವಿತೆಯ ಸಾಲು ಸಾಲು ನಗುವ
ತಂದಿತ್ತು, ಮಳೆಯ ನರ್ತನಕ್ಕೆ
ನಾಚಿ ನೀರಾಗಿತ್ತು...!!
❤️ಸುಮನ್ ಹೆಚ್ ಸಿ ❤️