...

7 views

ಕವನ - ಇಳಿ ವಯಸ್ಸು
ಇಳಿ ವಯಸ್ಸು

ನಗುಮೊಗವು ಎನಿತು ಚಂದ..
ಮಗುವಾಗುವ ಮನವು ಅಂದ..


ಸುಕ್ಕುಗಟ್ಟಿದ ಮುಖದಲ್ಲಿ
ಅನುಭವಗಳ ಗೆರೆಗಳಲ್ಲಿ
ಬೊಚ್ಚು ಬಾಯಿ ನೋಡಲ್ಲಿ
ಹಲ್ಲುಗಳಿಗೆ ಕೆಲಸವೆಲ್ಲಿ?!

ಮೊಮ್ಮಕ್ಕಳ ಜೊತೆಗೆ ಆಟವ ಆಡುತ
ಅನುಭವಗಳ‌ ಹಂಚಿಕೊಳ್ಳುತ
ಹಳೆಯ ಕಾಲದ ಹಾಡನು‌ ಹಾಡುತ
ದಿನಗಳ ಕಳೆವರು ಚಿಂತೆಯ ನೂಕುತ

ಮಿತ ಆಹಾರ, ಬೇಡ ಖಾರ
ನೆಮ್ಮದಿಯ ನಿದಿರೆಗೆ ನಿತ್ಯ ಚಂದಿರ
ಹೆಗಲ‌ಮೇಲಿದ್ದ ಜವಾಬ್ದಾರಿ ಭಾರ
ಇಳಿಸಿಕೊಳ್ಳು ಕಾಲ ಸುಂದರ

ಮಗುವಿನ ಮನಸ್ಸು ವರವಾಗಿದೆ
ನಾಳೆಯ ದಿನವು ಸನಿಹವಿದೆ
ಮಾಡುವುದೆಲ್ಲ ಮುಗಿಸಿಯಾಗಿದೆ
ಆತ್ಮ ತೃಪ್ತಿಯು ಕಾಣುತಿದೆ..

© Writer Sindhu Bhargava