...

16 views

ಕಾಡು ಕುಸುಮ..❤️❤️
ಕಾಡು ಕತ್ತಲೆಯ ನಡುವೆ
ನಸುನಾಚಿ ನಗುವಾಗ
ಬೆಳ್ಳಿ ಚುಕ್ಕಿ ಬೆಳಕು
ನೀನೆನಲು ತಪ್ಪೇನೆ.?

ಸೂರ್ಯ ಉದಯಿಸುವ ವೇಳೆ
ತೇಲಿ ಬರೋ ಗಾಳಿಯಲಿ
ಹಕ್ಕಿಗಳಿಂಚರದ ದನಿ
ನಿನ್ನ ಕಂಠ ಸಿರಿಯೇನೆ.?


ಸ್ನೇಹದ ಸೇತುವೆ ದಾಟಿ
ಹೃದಯದ ತಂತಿ ಮೀಟಿ
ಒಲವ ಸ್ವರ ಹೊಮ್ಮಿಸಿದ
ರತೀ ವೀಣೆ ನೀನೇನೆ.?

ಜೀವನ್ಯಾತ್ರೆಯ ಜೊತೆಗೆ
ಕಷ್ಟ ಕೋಣೆಯ ಒಳಗೆ
ಹೂ ಬಳ್ಳಿಯ ಸುಖವ
ಕಲ್ಪಿಸಿದ ನಿನ್ನ ಬಿಟ್ಟೆನೇ.?

ಒಂಟಿ ಚಕ್ರದ ರಥಕ್ಕೆ
ಸುಖ ದಾಂಪತ್ಯದ ಪಥಕ್ಕೆ
ಜೊತೆಯಾಗಿ ಸುಖಿ ನೀ
ನನ್ನ ಗೆಲುವೇನೇ..!!

ಇಂತಿ ನಿನ್ನವ..
© ಕಮಾಂಡೋ ಮಂಜು