...

20 views

ನಾನು??!!..
ಅವರಿಬ್ಬರ ಪ್ರೀತಿಯ ಫಲವಾಗಿ
ಪ್ರೇಮದ ಕಾಣಿಕೆಯಂತೆ
ಅಮ್ಮನ ಉದರಲಿ ಮೌಂಸದ
ಮುದ್ದೆಯಂತಿದ್ದ ನಾನು
ಅದೆಲ್ಲೋ ಇದ್ದ ಆತ್ಮ ಜೀವ ನೀಡಿದೆ
ತಾಯಿ ತಂದೆಯಯಿಂದ
ಗುರುತಿಸಿದ ನನ್ನನ್ನು
ಅಸ್ತಿತ್ವ ಬೆಳೆಯುವಾಗ
ಹಲವು ಸಂಬಂಧಗಳು ನನ್ನತನವನ್ನು ಹೆಚ್ಚಿಸಿವೆ
ಅಸ್ತಿತ್ವ ಕೆಳೆಯುವಾಗ
ಕೆಲವು ಸಂಬಂಧಗಳು ನನ್ನತನವನ್ನು ಭಕ್ಷಿಸಿವೆ
ಎಲ್ಲರೂ ಜೊತೆಗಿದ್ದರೆ ನನಗೊಂದು ಅಸ್ತಿತ್ವ
ಇಲ್ಲವಾದರೆ ನಾನು ????
ಏಕಾಂಗಿ.......
ಏಕಾಂಗಿಯಾಗಿ ಏಕಾಂತದಲ್ಲಿ
ಯೋಚಿಸಿದಾಗ ನನಗೆ ನಾನೇ
ಎಲ್ಲಾ ಎಂದು ಅನಿಸಿತು
ನಾನು ಯಾರೆಂದು ತಿಳಿಯಲು
ನನ್ನ ಅಸ್ತಿತ್ವವನ್ನ ಮತ್ತೊಮ್ಮೆ
ತಿರುಗಿ ನೋಡಬೇಕಿದೆ...