ಮನೋಮಂದಿರದಲ್ಲಿ ನೆಲೆಸು
ನಿನಗಾಗಿ ಮಿಡಿಯುತ್ತಿದೆ ಮನಸ್ಸು
ತೊರೆಯಬಾರದೇ ನನಗಾಗಿ ಮುನಿಸು
ನಗು ಮೊಗವು ಎಷ್ಟೊಂದು ಸೊಗಸು
ಪ್ರತಿ ರಾತ್ರಿಯು ನಿನ್ನದೊಂದೇ ಕನಸು ||1||
ನಿನ್ನ ಪಡೆಯಲು ಮಾಡುತ್ತಿರುವೆ ತಪಸ್ಸು
ಪ್ರೇಮ ಸತ್ರದಲ್ಲರ್ಪಣೆ ಕಾಳಜಿಯ ಹವಿಸ್ಸು
ಪ್ರಸನ್ನಳಾಗಿ ಒಪ್ಪಿಗೆಯ ವರವ ಕರುಣಿಸು
ತನುಮನದಲ್ಲಿ ಪ್ರಜ್ವಲಿಸುವುದು ವರ್ಚಸ್ಸು ||2||
ಮನೋಮಂದಿರದಲ್ಲಿ ಶಾಶ್ವತವಾಗಿ ನೆಲೆಸು
ಒಂಟಿ ಜೀವಕ್ಕೆ ಒಲವಾಮೃತ ಅನುಗ್ರಹಿಸು
ಜೊತೆಯಿದ್ದರೇ ಬಾಳಿಗೆ ಹೊಸ ಹುಮ್ಮಸ್ಸು
ಕಾರ್ಯಗಳಿಗೆ ದೊರಕುವುದಧಿಕ ಓಜಸ್ಸು||3||
#ಕನ್ನಡ #ಕವನ #ಪ್ರೇಮ
© ಗುಡ್ಗೆಪೋರ
ತೊರೆಯಬಾರದೇ ನನಗಾಗಿ ಮುನಿಸು
ನಗು ಮೊಗವು ಎಷ್ಟೊಂದು ಸೊಗಸು
ಪ್ರತಿ ರಾತ್ರಿಯು ನಿನ್ನದೊಂದೇ ಕನಸು ||1||
ನಿನ್ನ ಪಡೆಯಲು ಮಾಡುತ್ತಿರುವೆ ತಪಸ್ಸು
ಪ್ರೇಮ ಸತ್ರದಲ್ಲರ್ಪಣೆ ಕಾಳಜಿಯ ಹವಿಸ್ಸು
ಪ್ರಸನ್ನಳಾಗಿ ಒಪ್ಪಿಗೆಯ ವರವ ಕರುಣಿಸು
ತನುಮನದಲ್ಲಿ ಪ್ರಜ್ವಲಿಸುವುದು ವರ್ಚಸ್ಸು ||2||
ಮನೋಮಂದಿರದಲ್ಲಿ ಶಾಶ್ವತವಾಗಿ ನೆಲೆಸು
ಒಂಟಿ ಜೀವಕ್ಕೆ ಒಲವಾಮೃತ ಅನುಗ್ರಹಿಸು
ಜೊತೆಯಿದ್ದರೇ ಬಾಳಿಗೆ ಹೊಸ ಹುಮ್ಮಸ್ಸು
ಕಾರ್ಯಗಳಿಗೆ ದೊರಕುವುದಧಿಕ ಓಜಸ್ಸು||3||
#ಕನ್ನಡ #ಕವನ #ಪ್ರೇಮ
© ಗುಡ್ಗೆಪೋರ