...

19 views

ಗಜಲ್
ಕನಸಿನ ಹಂಗೇಕೆ ನಲ್ಲ ನನಸಾಗಿ ನೀ ಹಾಜರಿರುವಾಗ
ಆಸೆಗಳ ಹಂಗೇಕೆ ನಲ್ಲ ಮನಸಲಿ ನೀ ನಿಂತಿರುವಾಗ

ರಸಿಕ ಮನದ ಕೀಟಲೆ ಮಾತುಗಳೆ ಮನ ಕೆಣಕುವುವು
ಲಜ್ಜೆಯ ಹಂಗೇಕೆ ನಲ್ಲ ಜೊತೆಯಲಿ ನೀ ನೆಲೆಸಿರುವಾಗ

ನನ್ನ ಅವಯವಗಳ ಮಾಪನ ನಿನ್ನ ಅಧರಕೆ ಅರಿವಿದೆ
ಅಂಕೆಯ ಹಂಗೇಕೆ ನಲ್ಲ ನಲ್ಮೆಯಲಿ ನೀ ಸಂಧಿಸಿರುವಾಗ

ನಿನ್ನ ಬಾಹುಗಳಲಿ ಬಂಧಿಯಾಗಿ ಎದೆಬಡಿತ ಆಲಿಸುವಾಸೆ
ಸಂಯಮದ ಹಂಗೇಕೆ ನಲ್ಲ ಅನುರಾಗದಿ ನೀ ಅಪ್ಪಿರುವಾಗ

ಸುಮದ ಮಧು ಹೀರಿಲು ಬಂದಂತ ದುಂಬಿ ನೀನಲ್ಲವೇ
ಸಾವಿನ ಹಂಗೇಕೆ ನಲ್ಲ ಒಲುಮೆಯಲಿ ನೀ ಸೇರಿರುವಾಗ

© ಸುಕನಸು