...

4 views

"ಒಂಟಿ ಪಯಣ....
#AloneInCrowdಒಂಟಿಯಾದೆನು ಇಂದು
ಇರುವುದೊಂದೆ ಬದುಕಲಿ

ನಂಬಿದ್ದ ಕೈಗಳು
ಮೋಸಮಾಡಿದವಿಂದು

ಎಲ್ಲರೂ ಇದ್ದಾರೆಂಬುದು
ನನ್ನ ಈ ಬಾಳಲಿ

ಯಾರಿಗೆ ಯಾರಿಲ್ಲವೂ
ಅಲಿತೆನು ನನ್ನಲಿ

ಕಲ್ಪನೆಯಲಿ ಸುತ್ತಲೂ
ಇರುವರೆಂಬ ಭಾವ

ನೋಡಲು ಬರೀ
ಚಿತ್ತಾರದ ಪ್ರಭಾವ

ಮೌನದಿ ನಿಂತೆನು
ಮನದಿ ನೊಂದೆನು

ಪಾಪ ಪುಣ್ಯದ ಲೆಕ್ಕದಲಿ
ತಪ್ಪಿಹುದು ಏನಿಲ್ಲಿ

ಬೆಳಕಿಹುದು ಜಗದಲಿ
ಕತ್ತಲೆಯು ಆವರಿಸಿದೆ ನನ್ನಲಿ

ಏತಕೆ ಈ ಬದುಕು
ನಾನಿರುವುದು ಇಹಕು

ಸಾವಿನ ತುದಿಯಲಿ
ಭಯವು ನನ್ನಲಿ

ಇರುಳಿದು ಅಂತರದಲಿ
ಬದುಕಿಗೆ ಅರ್ಥವು ಇನ್ನೆಲ್ಲಿ..,✍
🧍‍♀️shobha 😔