...

10 views

ಕೌತುಕ
ಅರಳಬೇಕಿತ್ತು ಮುಗಿಲ ಮಲ್ಲೆಯಾಗಿ
ಬಾಡಿ ಬಸವಳಿಯುವ ಮುನ್ನ
ನಿನ್ನ ಸೇರುವ ತವಕ ಆದರೂ ಇರುತ್ತಿತ್ತು..

ಹಬ್ಬಿ ಸಂಭ್ರಮಿಸಬೇಕಿತ್ತು ವೀಳ್ಯದೆಲೆಯಾಗಿ
ರಸಗವಳದಿ ಮಿಳಿತವಾಗಿ ನಲುಗಿ ಹೋಗುವ
ಮುನ್ನ ನಿನ್ನ ಪೂಜೆಗೆ ಪಾತ್ರವಾಗುವ ಸಂಭ್ರಮವಾದರೂ ಇರುತ್ತಿತ್ತು..

ಬೆಳೆದು ನಿಲ್ಲಬೇಕಿತ್ತು ಹರುಷದಲ್ಲಿ ಬಾಳೆ
ಮರವಾಗಿ
ಬಳಸಿ ತಿಪ್ಪೆ ಸೇರುವ ಮುನ್ನ ಉಣ್ಣುವವರ
ಹಸಿವನಿಂಗಿಸುವ ಕಾಯಕದ ಖುಷಿ ಆದರೂ ಇರುತ್ತಿತ್ತು..‌

ಜನುಮ ತಾಳಿದ್ದು ಮನುಜಜನುಮದಲ್ಲಿ..ಏನಿದ್ದರೂ
ಅಲ್ಪತೃಪ್ತಿಯಿಲ್ಲಿ
ಸಾಧಿಸಲು ಅನುವುಂಟು ಆದರೂ ಆಗದಿಲ್ಲಿ ಏನೇನೂ...
ನಿರಾಸೆಯ ಮಹಲೊಳಗೆ ನಿಂತು ಮನವು
ಅಣಕಿಸುತಿದೆ
ಸುಟ್ಟು ಬೂದಿಯಾಗಿಯಾದರೂ ನಿನ್ನ ಸೇರುವ
ತವಕದ ಕೌತುಕವಾದರೂ ಉಳಿಯಲೆಂದು....
✍️ಪೂರ್ವವಾಹಿನಿ
© All Rights Reserved