...

17 views

ಸಂಶೋಧನೆ - 1
ಶೋಧನೆ ಸಂಶೋಧನೆ
ಸಾಗಲಿ ಈಗಲೇ
ಶೋಧನೆ ಸಂಶೋಧನೆ
ಸಾಗಲಿ ಬೇಗನೆ
ಕಾಣದ ಸತ್ಯವನ್ನು
ಕಾಣುವಂತೆ ಮಾಡು
ಕಣ್ಣಿಗೆ ಕಾಣೋ ಸುಳ್ಳು
ಕಾಣದಂತೆ ಮಾಡು.....................

ಕಂಡರೂ ಕಾಣದಂತೆ
ಇದ್ದರೂ ಇಲ್ಲದಂತೆ
ಕಾಡುವ ಪ್ರಶ್ನೆಗಳಿಗೆ
ಉತ್ತರ ಅರಿಯಲು
ಕಾಣುವ ನೋಟಕೆ
ಕಾರಣ ತಿಳಿಯಲು
ನೂರು ತಂತ್ರ ಮಾಡಿ...................

ಹುಡುಕೋ ಹುಡುಕೋ ನೀನು
ಕಾಣದ ಸತ್ಯವನ್ನು
ಬಿಡದೆ ಹುಡುಕೋ ನೀನು
ಸತ್ಯದ ಸಾಕ್ಷಿಯನ್ನು....................

ಎಲ್ಲೇ ಇದ್ದರೂ ಹೇಗೆ ಇದ್ದರೂ
ನೂರು ಕಣ್ಣ ತೆರೆದು.....................

ಸತ್ಯದ ಸರಮಾಲೆಯ ಸೆರೆಯಾಗಲಿ ಈಗಲೇ
ನಿಜ ಸತ್ಯವು ಅರಿಯಲಿ ಬೇಗನೆ...

ಏನೇ ಆದರೂ ಏನೇ ಬಂದರು
ಸಾಗಲಿ ಎಂದಿಗೂ
ಈ ಸತ್ಯದ ಶೋಧನೆ....................

ಹೊರಗೆಳೆಯೋ ನೀ
ಇರುವ ನಿಜವ
ಸಾಧಿಸು ಸಾಧನೆ
ಸಾಗಲಿ ಶೋಧನೆ........................

ಅಂಜದೆ ಹಿಂಜರಿಯದೆ ಮುಂದೆಯೇ ಮುನ್ನುಗ್ಗು ನೀ ಎಂದಿಗೂ ಸೋಲದೆ............

ಹುಡುಕೋ ನೀನು
ಸಿಗದ ಸುಳಿವು
ಆಗಲಿ ಸತ್ಯದ ಉಳಿವು
ಕಾಣಲಿ ಕಾಣದ ಸತ್ಯವು
ಸಾಗಲಿ ಶೋಧನೆ ನಿತ್ಯವೂ..........

ಪ್ರತ್ಯುತ್ತರ ಸಿಗುವವರೆಗೂ
ಹುಡುಕಾಟ ನಡೆಯುತ್ತಿರಲಿ
ಮರಳಿ ಯತ್ನವ ಮಾಡು
ಹಿಡಿದು ಸತ್ಯದ ಜಾಡು
ಬೆನ್ನತ್ತಿ ಹುಡುಕಾಡು....................

ಶೋಧನೆ ಸಂಶೋಧನೆ
ಸಾಗಲಿ ಹೀಗೆಯೇ
ಶೋಧನೆ ಸಂಶೋಧನೆ
ಸಾಗಲಿ ನಿಲ್ಲದೆ
ಶೋಧನೆ ಈ ಸಾಧನೆ
ಸಾಗಲಿ ಸೋಲದೆ....
ಸಾಗಲಿ ಸೋಲದೆ......
ಸಾಗಲಿ ಸೋಲದೆ......