...

4 views

ಅಂಜಿ ಕುಳಿತಿರೇನು ಫಲ


ಸಾಧನೆಯ ಹಾದಿಯೊಳು ವಿಧವಿಧದ ಕಷ್ಟವಿದೆ..
ಗುರಿಯ ಮುಟ್ಟದೆ ಅಂಜಿ ಕುಳಿತರೇ ಏನು ಫಲವಿದೆ ..
ಬದುಕಿನಲಿ ವ್ಯಥೆಗಳು ಬಂತೆಂದು ಹೆದರಿ ಏಕೆ ಓಡುವೆ..
ಸದ್ಗುಣಗಳ ಧರಿಸು ಅದು ವ್ಯಕ್ತಿತ್ವ ಅಲಂಕರಿಸುವ ಒಡವೆ..
ಬೇಟೆಗಾರನ ಬಾಣಕೆ ಹಕ್ಕಿ ರೆಕ್ಕೆ ಬಡಿಯದೆ ಕೂರದು..
ಮನುಜ ನೀನೇಕೆ ಕಷ್ಟಕೆ ಅಂಜಿ ಪ್ರಯತ್ನಿಸದೆ ನಿಂದೆ..
ಅಂಜಿ ಕುಳಿತರೆ ಮತ್ತೆ ಹಾರಲು ಸಾಧ್ಯವಾಗದು ಹಕ್ಕಿಗೆ..
ತೊಡರಿಗೆ ಬೆದರಿ ಕೂತರೆ ಬದುಕಲಾಗದು ಮನುಜಗೆ ..
ಮತ್ತೆ ಹಾರುವ ಮನವ ಮಾಡಲೇಬೇಕು..
ಕನಸುಗಳು ನನಸಾಗಿಸಲು ಉಳಿಯಬೇಕು..
ನಾಳೆ ಹೊಸ ಕನಸುಗಳು ಹುಟ್ಟ ಬಹುದು.
ಜೀವನದಲಿ ಸುಖವೇ ಬರೋದಿಲ್ಲವೆಂದು.. ನೋವನು ನೆನೆದು ದುಃಖಿಸಿ ಕುಳಿತು ಕುಗ್ಗಿದೊಡೇನು ಫಲ..
ಬದುಕ ಬವಣೆ ಅನುಭವಿಸದೆ ಹೇಡಿಯಾದರೇನು ಫಲ..
ಧೈರ್ಯದಿ ನಿಂತು ಬುದ್ಧಿ ಉಪಯೋಗಿಸಿ ಸಾಧಿಸು ಮನವೇ..
ಮುಂದೆ ನಡೆದರೆ ಬದುಕು ಸುಂದರ ಹೂದೋಟ ವಾಗಬಹುದಲ್ಲವೇ..
ಸಾವಿಗೆ ಅಂಜಿ ಕುಳಿತರೇ ಸಾವು ಬರದೇ ಇರುವುದೇ..
ಕಾಲನ ಕರೆ ಬಂದಾಗ ಎಲ್ಲ ಬಿಟ್ಟು ಹೊರಡಲೇಬೇಕು..
ಯಾವ ಸಂಬಂಧಗಳು ನಮ್ಮ ಹಿಂದೆ ಬರಲಾರದು..
ನಡುವಣ ಕೋಪ ತಾಪವೇಕೆ ಅಲ್ಲವೇ ..
ಬದುಕಿದೋ ಮೂರು ದಿನದ ಸಂತೆ ಎಲ್ಲವನು ಸಹಿಸಿಕೊಂಡು...
ಮುಂದೆ ನಡೆದರೆ ಬದುಕೇ ಸುಂದರ ಹೂತೋಟವಾಗಬಹುದಲ್ಲವೆ..

ರಾಧಿಕಾ ಗಿರೀಶ್ ಮಯ್ಯ