...

4 views

ಬದುಕುವ ದಾರಿ - ಕವನ
#WritcoPoemPrompt32
ಸೂರ್ಯನು ಪ್ರತಿದಿನ ಉದಯಿಸುತ್ತಾನೆ
ಮತ್ತು ಅಸ್ತಮಿಸುತ್ತಾನೆ,
ಭರವಸೆಯ ಮುರಿಯದ ಚಕ್ರ,
ನಿರೀಕ್ಷೆಗಳ ಜಾಗೃತಿ..

ಹೊಚ್ಚ ಹೊಸ ಕನಸೊಂದು
ಕಮಲದ ಹೂವಿಂದ ಅರಳಿ
ಇರುಳಿನಲ್ಲೇ‌ ನಗುತಲಿತ್ತು..

ಬಾಳೆಗೊನೆಯ ಹಣ್ಣ ಘಮಕೆ
ಬಾವಲಿಯ ಹುಚ್ಚು ಹೆಚ್ಚಿ
ಕಚ್ಚಿಕೊಯ್ದು ಕೊಂಡೊಯ್ಯಿತು..

ಬದುಕು ಕಟ್ಟಿ ಕೊಳ್ಳಬೇಕಾದ
ಇಬ್ಬನಿ , ಮುಂಜಾ‌ನೆಯ
ಸೂರ್ಯರಶ್ಮಿಗೆ ಅನುನೀಗಿತು..

ಇಂದಿನಿಂದಲ್ಲ, ಬಹಳ ಹಿಂದಿನಿಂದಲು
ಇಲ್ಲಿ‌ ಬದುಕಬೇಕು ಎನ್ನುವವರಿಗೆ
ಹಲವು ದಾರಿ, ಸೀದ ವಕ್ರ ತಿರುವು ಕೂಡ

ಸಿಂಧು🍁
© Writer Sindhu Bhargava