...

11 views

ಒಲವ ಸುಧೆ
ಕವನ ಶೀರ್ಷಿಕೆ:- ಒಲವ ಸುಧೆ

ರವಿತೇಜನ ಮೊಗದೊಳು ಮೂಡಿಹ
ರಶ್ಮಿಯ ಸ್ಪರ್ಶಕೆ ಚಿಗುರೆಲೆ ನಾಚುವಂತೆ

ಶರಧಿಯ ಒಡಲೊಳು ಜನಿಸಿದ
ಅಲೆಯಾರ್ಭಟಕೆ ತೀರವು ನಲುಗುವಂತೆ

ಕಾರ್ಮೋಡಗಳ ಅಂಚಲ್ಲಿ ಜಿನುಗಿದ ಹನಿಯು
ಅವನಿಯ ಸೇರಲು ತವಕಿಸುವಂತೆ

ಭೂಮಿಯೊಳು ವಸಂತ ಋತುವಿನಾಗಮನ
ಹೊಸ ಸಂಭ್ರಮವ ಪಸರಿಸುವಂತೆ

ಚೆಂದುಟಿಯೊಳು ಮೂಡಿಹ ನಿನ್ನ ಮುಗುಳ್ನಗೆಯು
ನನ್ನೀ ಮನವ ನಿನ್ನೆಡೆಗೆ ಸೆಳೆದಿಹುದು

ಶ್ರೀಪ್ರಭಾ ಎನ್