...

4 views

ನಗುವ ನೀರಾಜನ
ನಿನ್ನ ನಯನದಲಿ ನೋವೇಕೆ ನಲ್ಲೆ?
ನನ್ನ ನಗುವೇ ನಗಬಾರದೇ?

ನನ್ನ ನಗುವಲಿ ನಿನ್ನ ನಗುವು,
ನಂಬಿಕೆಯಿಟ್ಟು ನಕ್ಕು ನಗಲಿ,
ನಂಜು ನಶಿಸಿ, ನೋವನಳಿಸಿ,
ನಸುನಗಲಿ ನಗುವಿನ ನಸುಕಿಗೆ!

ನಿನ್ನ ನಗುವಿನ ನಗವ ನೀಡು,
ನನ್ನ ನಗುವಿನ ನತ್ತ ನೀಡುವೆ!
ನಕ್ಕುಬಿಡಲಿ ನಯನದ್ವಯಗಳು,
ನಮಗೇಕೆ ನೀರಸದ ನೀರವ?

ನವವಧುವಿನೊಲು ನಗುವು ನಾಚಿದೆ,
ನಲ್ನುಡಿಗೆ ನಳಿನ, ನಗುತ ನಕ್ಕಿದೆ.
ನಳನಳಿಸುವ ನಯನದ್ವಯಗಳು,
ನಗೆಯ ನಾದವ ನುಡಿಸಿವೆ!

ನನ್ನ ನಗುವಿಗೆ, ನಿನ್ನ ನಗುವಿಗೆ,
ನಕ್ಕು ನಲಿಯಲಿ ನಿಕೇತನ.
ನಮ್ಮ ನಗುವಿಗೆ ನಿಷ್ಪತ್ತಿಯಾಗಲಿ,
ನೂರು ನಗೆಗಳ ನೀರಾಜನ!

#ಕೃಷ್ಣಕವಿ #ಏಕಾಕ್ಷರ_ಕವನ
© ಕೃಷ್ಣಕವಿ