...

22 views

ಸೌಂದರ್ಯ???
ಈ ಹುಚ್ಚರ ಸಂತೆಯಲಿ
ನೂರೆಂಟು ಅರ್ಥ ಇದೆ ಆದ್ರೆ
ನಿಜವಾದ ಸೌಂದರ್ಯ ಅರ್ಥ
ಕಗ್ಗಂಟು ಯಾರಿಗೂ ಅರ್ಥ ಆಗಿಲ್ಲ

ತಾಯಿ ಮನಸನಲ್ಲಿ ಬೆಲೆ
ಕಟ್ಟಲಾಗದ ಆಂತರ್ಯ
ಐತಿ ಅದು ನಿಜವಾದ
ಸೌಂದರ್ಯ ಅಂದ್ರ

ಮತ್ತೆ ಅಪ್ಪನ ಬಣ್ಣ ಬಣ್ಣದ
ಕನಸ ಒಳಗ ನಮ್ಮೆಲ್ಲರ
ಬದಕು ಅಡಗಿದೆ ಮತ್ತೆ

ಅಕ್ಕರೆಯ ಸೌಂದರ್ಯ
ಅಂದ್ರ ಅಕ್ಕ ತಂಗಿ ಅಣ್ಣನ
ಕಣ್ಣೊಳಗ್ ಕರುಳಿನ ಪ್ರೀತಿ
ಸೌಂದರ್ಯ ಅಡಗಿದೆ ಮತ್ತೆ

ಸೌಂದರ್ಯ ಅನ್ನೋದ್
ಬರಿ ದೇಹದಲ್ಲಿ ಇಲ್ಲ
ಭಾವನೆಗಳ ಜೊತೆ ಬದುಕ
ಬೆಸೆಯುವ ಒಂದು
ಪ್ರೀತಿಯ ಒಲವಾಗಿದೆ

#Kannada #Kavita #writer #writersofinstagram #poem
© ಕನಸಿನರಸಿ ✍️