...

11 views

ಸಾವಿರ ಆಸೆ ಕನಸುಗಳ ಜೊತೆ...
ಹೊತ್ತಿಹುದು ಈ ಮನ
ಸಾವಿರ ಅಸೆಗಳ
ಕಂಡಿಹುದು ಕಂಗಳು
ನೂರಾರು ಕನಸುಗಳ
ಇಂದಲ್ಲ ನಾಳೆ ನೀ ಸಿಗುವೇ
ಎಂಬ ಭರವಸೆಯಲ್ಲಿ....

ನೆಟ್ಟಿರುವೆ ದೂರಕೆ ದಿಟ್ಟಿಯ ( ದೃಷ್ಟಿ )
ಕಾದು ನಿಂತಿಹೆನು ಕಾಣಲು ನಿನ್ನ
ಮರೀಚಿಕೆ ಆಗದಿರು ನೀ
ಮುದ್ದು ನಲ್ಲಾ....

ಈ ಪೆದ್ದು ಮನಸು
ಮುದ್ದು ಮಾಡಲು
ಕಾದು ಕುಳಿತಿದೆ
ಇಲ್ಲ ಸಲ್ಲದನು ನೆನೆದು
ಮನದಲಿ ಚಿತ್ರಿಸಿ ನಿನ್ನ..
ಚಿಂತೆಯ ಗೂಡಾಗಿದೆ....



ದೇವಿ ...✍️