...

33 views

ನೀನಿರದ ಮೇಲೆ..🗿
ಮೂಡಣದ ರವಿ ಮಂಕಾಗಿರಲು
ಇಂದು ಮೋಡಗಳು
ಕಂಬನಿ ಮಿಡಿಯುತಿಹವು..🌧️
ಕಾರಣ.....!!
ಜಗವ ಬೆಳಗೋ ನೀನೇ ಮಂಕಾದರೇ
ಸೃಷ್ಟಿಯ ಕಥೆ ಏನೆಂದು..?

ಹಾಗೆಯೇ..!!
ನನ್ನೊಲವೇ ನೀ ದೂರಾಗಿರಲು
ನೆಮ್ಮದಿಯ ಜೀವನ ನನಗೆಲ್ಲುಂಟು..!

ನೀನಿರದ ನೋಟಗಳು,
ಹಿತವಿಲ್ಲದ ಸಂಜೆಯ ಜೊತೆ
ನೊಂದಿಹವು ಕಣ್ಣುಗಳು..

ಕನಸು ಬೇಕೆನಿಸಿದರು,
ನಿದ್ದೆಯ ಒಳಗೂ ಕಂಗಳು ಒದ್ದೆಯಾಗಿ
ಬೇಸರಕ್ಕೆ ಕನಸುಗಳು ದುರಾಗಿವೇ..

ಬದುಕು ಹಸನಾಗಿಸದೆ,
ಮನಸ್ಸಿನ ಪೀಕಲಾಟಕ್ಕೆ
ಕಣ್ಣುಗಳು ಮುಂದಿನ ದಾರಿಯ ದಿಕ್ಕನ್ನೇ ಮರೆತವು,
ಬದುಕುವ ರೀತಿಯೇ ತಿಳಿಯದೆ
ಜೀವನದ ಪಥವು ಬದಲಾಗಿ ಹೋಯಿತು..

ಮೊದಲೇ ಬಿಟ್ಟು ಬಿಡದೆ
ಕಾಡುವ ನಿನ್ನ ನೆನಪುಗಳು,
ಜೊತೆ ಜೊತೆಗೆ ಈ ಜಡಿ ಮಳೆಯಲ್ಲಿ
ಮೂಡಿಬರದೆ ಮಂಕಾಗಿಹ
ನೇಸರನಂತೆ ಏಕಾಂಗಿಯಾಗಿ ಸಾಗಿದೆ....!!!