...

1 views

ಹೊಂಬೆಳಗು

ಹರಿದು ಬಂತು ಹೊಳೆದು ಬಂತು
ಬಾನಿಂದ ತಾ ಜಾರಿಬಂತು
ಬಂಗಾರ ಬಣ್ಣದ ಹೊಂಬೆಳಗು
ಸಿಂಗಾರಗೊಂಡಿತು ಬೆಳ್ಮುಗಿಲು.....

ಹೊನ್ನ ನೀರಿನಲಿ ಮೀಯುತೇಳುತ
ಅಗೋ ಬಂದ ನೇಸರ
ಮುಗಿಲಹಾಳೆಗೆ ಬಣ್ಣದುಂಬಿ
ಬರೆದು ಸುಂದರ ಚಿತ್ತಾರ...

ಧರೆಯಂಗಳದಿ ಬೆಳಗು ನೋಡು
ರವಿಯೊಡನೆ "ಉಷೆ" ಯ ಕಾಣು
ಮಾಡಿ ದಿನಪಗೆ ದಿನದಾರುತಿ
ಹೆಚ್ಚಲಿ ಸೂರನ ಕೀರುತಿ

ಮಂಗಳಮಯ ಬೆಳಗು ತರಲಿ
ಲೋಕ ತುಂಬ ಸಮೃದ್ಧಿಯು
ಲೋಕಕಂಟಕ ಕಳೆದು ಹೋಗಿ
ಹರಡಲಿ ಸುಖಶಾಂತಿಯು..

ಬೆಳಗು ಬೆಡಗಿನ ಕಡಲಿನೊಳು
ಮುಳುಗಿಬಿಡುವ ಭಾವವಿದೆ
ಬಾನಬೆಳಗುವ ದೇವ ನಿಮ್ಮ
ನೋಡುತ ಕರಗುವ ಆಸೆಯಿದೆ...
ಶುಭದಿನ.. ಶುಭ ಹಾರೈಕೆ. 💐