...

4 views

ವಿರಹ ಗೀತೆ : ಈ ಬೆಳದಿಂಗಳ ರಾತ್ರಿ
ವಿರಹ ಗೀತೆ : ಈ ಬೆಳದಿಂಗಳ ರಾತ್ರಿ

ಈ ಬೆಳದಿಂಗಳ ರಾತ್ರಿ ಸುಡುತಿದೆ ಏತಕೆ?
ನೀನಿಲ್ಲದ ನೆವವು ವಿರಹಕೆ ತಿರುಗಿದೆ..

ವಿರಹವು ವೇದನೆಯಾಗಿ ಉಳಿಯದೇ
ಭಯ ಭೀತಿ ತುಂಬಿದ ಬದುಕಾಗಿದೆ
ಕಡುಗತ್ತಲೆ , ಕಠಿಣ ಸನ್ನಿವೇಶಗಳ
ಎದುರಿಸಲಾಗದೇ ಮನ ಮುದುಡಿದೆ..

ಮಲ್ಲಿಗೆ ಮೃದುವು ಚುಚ್ಚುತಿದೆ
ರೆಂಬೆಯ ಕಡಿದಂತಾಗುತಿದೆ..
ಚಿಗುರೆಲೆಯನ್ನು ಚುವುಟಿದ ಭಾವ
ಮೊಗ್ಗಿಗೆ ಹುಳುಕು ಹಿಡಿದಂತಿದೆ..

ಹರಿವ ನೀರಿನಲಿ ಕಸದ ರಾಶಿ
ನದಿಯ ಸೇರಲು ಅಣೆಕಟ್ಟಿನ ಭೀತಿ
ಕಡಲ ಅಲೆಗಳು ಕಲ್ಲಿಗಪ್ಪಳಿಸೆ
ಕಷ್ಟವ ಕೇಳದ ಕಲ್ಮನಸ್ಸಿನ ರೀತಿ

ಬಿಳಿಹಾಳೆಯಲಿ‌ ಮೂಡಿದ ಕಲೆಯಂತೆ
ಕವನ ಬರೆದು ಅಳಿಸಿದಂತೆ
ಮತ್ತೆ ಬರೆಯಲು; ಮರೆತೆ ಎಲ್ಲವ
ಮನದ ನೋವಿಗೆ ಜಾಗ ಎಲ್ಲಿದೆ‌ ?!

ಕಾಡಿನ ಮಾರ್ಗದಿ ನಡೆದ ಅನುಭವ
ಗೂಬೆ ನರಿಗಳ ಗೂಳಿಡುವಿಕೆಯು
ಹೆಬ್ಬಾವು, ಚಿರತೆಯ ದಾಳಿಯಾದರೆ
ನೀನಿಲ್ಲದ ವಿರಹವು ಭಯ ತರಿಸುವುದು..

ಬಯಲ‌ ಹಾದಿಯಲಿ ಒಂಟಿ ಪಯಣ
ದಾಹ ತೀರಿಸಲು ಹನಿ‌ ನೀರಲಿಲ್ಲ
ಹೇಗೆ ಬಚ್ಚಿಡಲಿ ಬಟಾಬಯಲಿನಲಿ
ಈ ಒಂಟಿ ಪಯಣಕೆ ಕೊನೆಯಿಲ್ಲ..

- ಸಿಂಧು ಭಾರ್ಗವ, ಬೆಂಗಳೂರು
© Writer Sindhu Bhargava