...

8 views

"ಚಂದಮಾಮ"
ತಿಳಿನೀಲಿ ಬಾನಲ್ಲಿ
ಬೆಳ್ಳಿಯುಡುಗೆ ತೊಟ್ಟು
ಪ್ರಶಾಂತ ವದನದಿಂದ
ನಸುನಗುವ ಚೆಲ್ಲುತ ಚಿತ್ತವ
ಸೆಳೆಯುವ ಚಿತ್ತಚೋರ,..!!
ತಂಗಾಳಿಯ ಜೊತೆಗೂಡಿ
ಮನ ಸೂರೆಗೊಂಡು
ಮೋಡಿ ಮಾಡುತ
ಹೃನ್ಮನ ಸೆಳೆಯುವ
ಸುರಸುಂದರ ಸುಂದರಾಂಗ.!!
ಸೃಷ್ಟಿಯ ಸೌಂದರ್ಯ,ಅಚ್ಚರಿ,
ವಯ್ಯಾರ ಸುಖ ಶಾಂತಿ
ನೆಮ್ಮದಿಯನ್ನೆಲ್ಲ ತನ್ನಲ್ಲೇ
ಹುದುಗಿಸಿಕೊಂಡಿರುವ ಅಂದ
ಚಂದದ ಚೆಲುವ ಸೊಗಸುಗಾರ ..
ಬಾನಂಗಳದ ರಾಜಕುಮಾರ..
ಚಂದಮಾಮ..!!