ನಾನು ಯಾರು?
ಜೀವನವೇ ಒಂದು ದೊಡ್ಡ ಒಗಟು. ಹೀಗಿರುವಾಗ, ನನ್ನನ್ನು ಒಂದು ಒಗಟು ಹೀಗೆ ಪ್ರಶ್ನೆ ಮಾಡಿತು.
ನಾನು ಯಾರು?
ಮನದಾಳದ ಸಮುದ್ರ ನಾನು,
ಮನಸಿನ ಕನ್ನಡಿಯೂ.
ಕೋಮಲವಾದ ಕಮಲದ ಮತ್ತೊಂದು ಸ್ವರೂಪ ನಾನು,
ಅಕ್ಕರೆಯ ಅಂಚು ನಾನು.
ಮೋಡದ ಮಳೆ ನಾನು ನಿನ್ನ ನೋವಿಗೆ,
ಅಮೃತದ ಧಾರೆ ನಾನು ನಿನ್ನ ಸಂತಸಕೆ.
ಮನಸಿನ ನಿರ್ಮಲತೆಯ ಭಾವ ನಾನು,
ನಿನ್ನ ಮನದೊಳಗಿನ ಪ್ರತಿಯೊಂದು ಭಾವನೆಯತೋರೊ ನಿನ್ನ ಪ್ರತಿರೂಪ ನಾನು.
ಅಳುವೆನು, ನಗುವೆನು, ನಿರ್ಮಲವಾಗಿರುವೆನು.
ನಾಚುವೆನು, ಕೋಪಗೊಳ್ಳುವೆನು, ಕ್ರೋಧಗೊಳ್ಳುವೆನು.
ಸಂತೈಸುವೆನು, ಪ್ರೀತಿತೋರುವೆನು, ಸ್ನೇಹತೋರುವೆನು.
ಭಯಪಡುವೆನು, ಧೈರ್ಯ ತುಂಬುವೆನು, ಎಲ್ಲ ಭಾವನೆಯ ವ್ಯಕ್ತಪಡಿಸುವೆನು.
ಹೋಲಿಸುವರು ನನ್ನನ್ನು ಕಮಲಕೆ, ದೀಪಕೆ..
ಆಡುವೆ ನಾ ಮನದಾಳದ ಮಾತನ್ನು ಪದಗಳಿಲ್ಲದೆ..
ಹಾಗಾದರೆ ಯಾರು ನಾನು?
ತಿಳಿಯಿತೆ ನಾನು ಯಾರೆಂದು,
ಅದೇ ನಾನು, ನಾನೆ ನಿನ್ನ ಕಣ್ಣು..
© All Rights Reserved