...

27 views

💕ನೀನಿಲ್ಲದೆ ನಾನಿಲ್ಲ 💕
ನೀನಿಲ್ಲದೆ ನಾನಿಲ್ಲ
ಈ ಪೃಥ್ವಿಯಲ್ಲಿ ನೀನೆಯಲ್ಲ
ಆಂತರ್ಯ ಅರಿತು ನೋಡು
ಮನದಾಳದಲ್ಲಿ ಬಂದೆ..!!

ಕನಸು ನನಸುಗಳ ಮರೆಮಾಚಿಲ್ಲಿ
ಹುರುಪು ತುಂಬಿದೆ ಮನಕೆ
ಹಿತ ಮಾತು ಸವಿದೆ ಆಡುವ
ನಿನಾದದಲಿ ಸಂತಸವ ತಂದೆ..!!

ಉಸಿರಲಿ ಬೆರೆತ ಉಸಿರಾದೆ
ಮನಸಿನ ಭಾವಗಳ
ಪ್ರೇಮದ ಪದಕೇ
ನೀ ಸ್ಪೂರ್ತಿ ತುಂಬಿದೆ..!!

ಭಾವನುರಾಗದ ಬಾಹು ಬಂಧಕೆ
ಅನುದಿನ ಅನುಕ್ಷಣದಿ
ಸ್ಪರ್ಶಿಸಿ ಸುಖಿಸುವ ಬದುಕಿಗೆ
ಬೆಸೆದು ಚಿಲುಮೆಯಾದೆ..!!
✍️ಶೃತಿ ಶೈವ

#WritcoQuote#writcoapp#Writer#Writco#shruthishaiv#ನೀನಿಲ್ಲದೆನಾನಿಲ್ಲ#Writcopoem#ಪ್ರೀತಿ#ಕನಸು#ಉಸಿರು