...

4 views

ಆಡುವ ಮಾತು

ನುಡಿವ ನುಡಿ ಆಡುವ ಮಾತು ನೆಟ್ಟಗಿರಲಿ
ಸರಿ ತಪ್ಪುಗಳ ಅರಿವು ನಮ್ಮ ನಾಲಿಗೆಗಿರಲಿ
ಬಳಸುವ ಭಾಷೆ ಶುದ್ಧ ಪರಿಶುದ್ಧವಾಗಿರಲಿ
ಹರಿಬಿಡದೆ ನಮ್ಮ ನಾಲಿಗೆ ಹಿಡಿತದಲ್ಲಿರಲಿ!

ಮಾತನಾಡಿದರೆ ಕೇಳುವ ಕಿವಿಗೆ ಹಿತವಾಗಿರಲಿ
ಕೊಂಕುಮಾತುಗಳು ಕಲಹಕ್ಕೆ ಕಾರಣವಾಗದಿರಲಿ
ಬಿರುಸಾದ ಪದ ಬಳಕೆ ನೋವು ತರದಿರಲಿ
ಬೈಗುಳ ಕುತ್ತುಆಪತ್ತಿಗೆ ಎಡೆಮಾಡಿಕೊಡದಿರಲಿ!

ಒಳ್ಳೆಯ ನಡೆ-ನುಡಿಗೆ ಕೊಡುವರು ಕಿಮ್ಮತ್ತು
ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು
ಗತ್ತಿನ ಮಾತಿಗಿದೆ ದೌಲತ್ತು ತಾಕತ್ತು ಕಿಮ್ಮತ್ತು
ಆಡುವ ಮಾತಿಗೆ ಬರಬಹುದು ಸಿರಿ ಸಂಪತ್ತು!

ಕನ್ನಡಮ್ಮನ ನುಡಿಪದಗಳಲ್ಲಿದೆ ಗತ್ತು ಗಮ್ಮತ್ತು ತಾಕತ್ತು
ಪ್ರೀತಿಪ್ರೇಮ ಆನಂದ ಅರಳಿಸಲಿ ನಮ್ಮಮಾತು
ನಮ್ಮ ನಾಲಿಗೆಯಲ್ಲಿ ಕನ್ನಡನುಡಿ ನಲಿದಾಡುತ್ತಿರಲಿ
ಕನ್ನಡಮ್ಮನ ಮಕ್ಕಳಲ್ಲಿ ಐಕ್ಯತೆ ಎದ್ದು ಕಾಣಲಿ
ಚಂದು ವಾಗೀಶ ದಾವಣಗೆರೆ