ವಾಸ್ತವ
ಎತ್ತ ನೋಡಿದರಲ್ಲಿ ಕಾಂಕ್ರೀಕ್ಟ್ ರಸ್ತೆ. ವಾಹನಗಳ ಕರ್ಕಶ ಶಬ್ಧ. ಜುಳುಜುಳು ಹರಿಯುತ್ತಿದ್ದ ಕೆರೆಯ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು. ಆಗಸದೆಡೆಗೆ ನೋಡಿದರೆ ಬೆಳ್ಳಿ ಮೋಡಗಳ ಬದಲು ವಾಹನಗಳ ದಟ್ಟ ಹೊಗೆಯೇ ನೋಟಕ್ಕೆ ಸಿಲುಕುವುದು. ಪ್ರಕೃತಿಯ ಸೌಂದರ್ಯ ಬಹುವಾಗಿ ಕಳೆಗುಂದಿದೆ ಎಂದು ಯೋಚಿಸುತ್ತಿದ್ದ ಗುಬ್ಬಚ್ಚಿಗೆ ಇದ್ದಕ್ಕಿದ್ದಂತೆ ಉಸಿರುಗಟ್ಟಿದ ಅನುಭವ. ಒಹ್! ತಾನು ಕುಳಿತಿರುವುದು ಮರದ ಮೇಲಲ್ಲ ಮೊಬೈಲ್ ಟವರ್ ನ ಮೇಲೆ ಎಂದು ನೆನಪಾಗಿ ಪುರ್ರ್ ಎಂದು ಹಾರಿ ಹೋಯಿತು.