...

11 views

ಪುನೀತ
ಜೀವಾತ್ಮನಿವನು ಯಾರಿವನು?
ಎರಡು ನಕ್ಷತ್ರಗಳ ಪ್ರೇಮದ ಕಾಣಿಕೆ;
ಸನಾದಿ ಅಪ್ಪಣ್ಣನ ಹೊಸ ಬೆಳಕು
ಈ ಭೂಮಿಗೆ ಬಂದ ಭಗವಂತ..!!

ನಗುಮೊಗದ ಸರ್ದಾರನೀತ
ಭಾಗ್ಯವಂತ ಅಂಜನಿಪುತ್ರ;
ಗಂಧದಗುಡಿಯ ವಸಂತಗೀತ
ರಾಜ್ ಯುವರತ್ನ ಪುನೀತ..!

ಬಿಂದಾಸ್ ಜಾಕಿ ರಾಮ
ನಮ್ಮ ಬಸವ ದೊಡ್ಮನೆ ಹುಡ್ಗ;
ಲಕ್ಕಿ ಮ್ಯಾನ್ ಪವರ್ ಪರಶುರಾಮ
ಹುಡುಗರ ಜೇಮ್ಸ್ ಅಣ್ಣಾಬಾಂಡ್..!

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ
ಬಾನ ದಾರಿಯಲ್ಲರಳಿದ ಬೆಟ್ಟದ ಹೂವು;
ಶಿವ ಮೆಚ್ಚಿದ ಕಣ್ಣಪ್ಪನ ಧ್ರುವತಾರೆ
ತಾಯಿಗೆ ತಕ್ಕ ಮಗ humble politician ನೋಗ್ ರಾಜ್..!

ಪೃಥ್ವಿ ಆಕಾಶ ಮೈತ್ರಿ ಮಿಲನಕೆ
ನಿನ್ನಿಂದಲೇ ನಗುತಿದೆ ಶಕ್ತಿಧಾಮ,
ಚಲಿಸುವ ಮೋಡಗಳ ಚಕ್ರವ್ಯೂಹದೊಳು
ಕಾಣದಂತೆ ಮಾಯವಾದ ಪರಮಾತ್ಮ..!

ಅಜಯ, ರಣ ವಿಕ್ರಮ, ವೀರ ಕನ್ನಡಿಗ
ಮೌರ್ಯ ವಂಶಿ ಅರಸು ರಾಜಕುಮಾರ..!
ಯಾರೇ ಕೂಗಾಡಲಿ ಬೊಂಬೆ ಹೇಳುತೈತೆ
ಅಪ್ಪು ಅಜರಾಮರ, ನೆಪ್ಪು ಅಮರಾಮರ.!!

© ಕೊಳಲು (ವೇಣುಗೋಪಾಲ್ ಎಂ ಎನ್)