...

9 views

ಹಸಿರ ಮಂಥನ

ತುಂತುರು ಹನಿಗಳು ಸುರಿದಿದೆ ಅನವರತ,
ಮುಂಗಾರು ವರ್ಷಧಾರೆ ಅಭಿಷೇಕ ಅನಿರತ,
ವರುಣನ ಸಿಂಚನವು ನಭದಿಂದ ಭೂಮಿಯತ್ತ,
ಹಸಿರಿನ ವನಸಿರಿಯ ಹಾಸಿಗೆಯು ಸುತ್ತಮುತ್ತ,
ಕಣಿವೆಗಳ ನಡುವಿನಲಿ ಹರಿಯುವ ಝರಿಗಳು,
ನಿಸರ್ಗವೇ ಕುಣಿದಂತಿದೆ ಪ್ರಕೃತಿಯ ಮಡಿಲೊಳು,
ವನಸಿರಿಯ ಮಡಿಲಲ್ಲಿ ಹಸಿರಿನ ಮಂಥನ,
ವಧುವಿನಂತೆ ಅಲಂಕರಿಸಿ ಮಾಡಿದೆ ಆಹ್ವಾನ,
ಜೀವಚರ ಆನಂದದಿ ನಲಿದು ಕುಣಿದಿದೆ,
ಜುಳುಜುಳು ನಿನಾದದ ಝೇಂಕಾರ ಹರಿದಿದೆ,
ಬೆಟ್ಟಗುಡ್ಡಗಳ ನಡುವಣ ಹರಿಯುವ ಝರಿಗಳು,
ಸಂತಸದಿ ನಲಿಯುವ ನವಿಲಿನ ನರ್ತನಗಳು,

ಶ್ರೀಪಾದ ಆಲಗೂಡಕರ ✍️✍️

© SripadAlgudkar ಕಾವ್ಯಶ್ರೀ