...

11 views

ಕನ್ನಡ ಪದಗಳ‌ ಚಮತ್ಕಾರ ಭಾಗ ೦೨
ಕನ್ನಡ ಪದಗಳ‌ ಚಮತ್ಕಾರ ಭಾಗ ೦೨

ದತ್ತಪದಗಳಿಗೊಂದಷ್ಟು ಬರಹಗಳು
🌼🌼🌼🌼🌼🌼🌼🌼🌼🌼🌼🌼
೧)) ಹನಿಗವನ : ಖನಿಜ 💐

ಕನ್ನಡ ಶಬ್ದಕೋಶದಲ್ಲಿ
ಕೋಟಿ‌‌ ಕೋಟಿ ಪದಗಳ ಆಗರ
ಆಲೋಚನೆ ಮಾಡುತ ಕುಳಿತರೆ
ಚುಟುಕು ಕವನಗಳಿಗಿಲ್ಲ‌ ಬರ
ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಅದ್ಭುತ ಖನಿಜ ಸಂಪತ್ತಿನಂತೆ, ಇದು ಕನ್ನಡಮ್ಮನ ವರ

(ಬರೆಯಿರಿ ಬರೆಯುತ ಕನ್ನಡಮ್ಮನ ಆರಾಧಿಸಿರಿ..)

೨)) ಚುಟುಕು : ಖರ್ವ

ಸುಳ್ಳನು ಎಂದಿಗೂ ಆಡದಿರು
ಎಂಬುದು ಹಿರಿಯರ‌ ಹಿತನುಡಿ
ಖರ್ವನ ಎಂದಿಗೂ ನಂಬದಿರು
ಎನ್ನುವ ಮಾತು ಎಷ್ಟು ಸರಿ??

🌼🌼🌼🌼🌼🌼🌼🌼🌼🌼🌼🌼
ಹೈಕು ರಚನೆ (೫-೭-೪ ಪದ್ಯ)
ದತ್ತಪದಗಳು : ಗಜಗಮನ , ಗಜಿಬಿಜಿ

೧)
ಗಂಭೀರ ಮುಖ
ತೀಕ್ಷ್ಣವಾದ ಕಂಗಳು
ಗಜಗಮನ

೨)
ಮನೆ ದೊಡ್ಡದು
ಎಲ್ಲೆಡೆ ಗಜಿಬಿಜಿ
ಜೋರಾದ ಆಟ

🌼🌼🌼🌼🌼🌼🌼🌼🌼🌼🌼🌼
ತನಗ ರಚನೆ ( ೭-೭-೭-೭ ಪದ್ಯ)

ದತ್ತಪದ: ಕಾಲಗತಿ

ಕರಗೋ ಕಾಲಗತಿ
ಈಡೇರದ ಕನಸು
ಹೆಚ್ಚಲಿ ಕಾಲಮಿತಿ
ಸೋಲೊಪ್ಪದ ಮನಸ್ಸು

ಸಿಂಧು ಭಾರ್ಗವ ಬೆಂಗಳೂರು
© Writer Sindhu Bhargava