...

10 views

ಸುರಿಮಳೆ
ಮಳೆ....
ಮಳೆ ಮಳೆ ಸುರಿ ಮಳೆ
ಒಡಲು ತುಂಬಿ ಸುರಿ ಮಳೆ
ಕಡಲು ತುಂಬಲು ಸುರಿಮಳೆ
ಇಳೆಯ ಮೀಯಲು ಸುರಿಮಳೆ...
ಮನವ ಕಳೆಯುವ ಮಳೆಯಿದು
ಮಧುರ ನೆನಪಿನ ಮಳೆಯಿದು
ಮುಂಗಾರಿನ ಸಿಂಗಾರದ
ಹೊನ್ನಬಿಂದು ಮಳೆಯಿದು...
ಮಣ್ಣು ಹೊಸೆದು ಕಣ್ಣು ತೆರೆದು
ಮೊಳಕೆ ಎಳೆಯುವ ಮಳೆಯಿದು
ಅನ್ನದಾತನ ಹೆಗಲ ಹೊತ್ತು
ತುತ್ತನೀವ ಮಳೆಯಿದು....
ಕೈಚಾಚಿ ಬೊಗಸೆಯೊಡ್ಡಲು
ಮುತ್ತನೀವ ಮಳೆಯಿದು
ಮೈಯನೊಡ್ಡಿ ಕಣ್ಣು ಮುಚ್ಚಲು
ಮುದವ ನೀಡುವ ಮಳೆಯಿದು...
ಹಣಿವ ಹನಿಯು ಸ್ವರಕೆ ಮೇಳವು
ನೆಲಕೆ ಮಧುರ ಗಾನವು
ಸುರಿವ ಮಳೆಯಲಿ ನನ್ನನಿನ್ನ
ಹರಿದು ಭಾವಗೀತೆಯು. ....