...

15 views

ಕೇಳುವಿರಾ ನನ್ನ ಕಥೆ...😔
ಛೇ!ತುಂಬಾ ಬೇಜಾರು ಆಯ್ತೂರಿ..ನಾನು ಅಂದ್ರೆ ಏನು ನಿಮಗೆ?ಅಷ್ಟು ಕಳಪೆಯಾ...ಅಷ್ಟು ಸಲೀಸಾಗಿ ತಗೋಬೇಡಿ ನನ್ನ... ನಾನು,ನಾನಂದ್ರೆ ಕೆಲವೊಮ್ಮೆ ಹಸಿವನ್ನು ಇಂಗಿಸುತ್ತೀನಿ ಗೊತ್ತಾ?ಅಂತ ಹಸಿವು ಇಂಗಿಸೋ ಶಕ್ತಿ ಇರುವ ನನ್ನನ್ನು, ನೀವು ಹೋಳಿ ರಂಗಿನ ಜೊತೆಯಲ್ಲಿ ನನ್ನ ಕೂಡ ಹೊಡೆದು, ಒಡೆದು ಬೀದಿ ಕಸ ಮಾಡುತ್ತೀರಾ?ಯಾವ ನ್ಯಾಯಾರೀ?
ಆಮ್ಲೇಟ್, ರೈಸ್ ಜೊತೆಯಲ್ಲಿ, ಕರಿ ಜೊತೆಯಲ್ಲಿ ಸೇರ್ತೀನಿ.ಅಶಕ್ತ ಜನರಿಗೆ ಶಕ್ತಿ ತುಂಬುವ ಪ್ರೋಟೀನ್ ನಾನು.ಹಳ್ಳಿ ಮದ್ದುಗಳಿಗೆ ಮೂಲ ಅವಶ್ಯಕ ನಾನು.ದಿನ ಬೆಳಗಾದರೆ ಬೇಕ್ರಿಯಲ್ಲಿ ನಿಂತು ತಿಂತೀರಲ್ಲ ಎಗ್ ಪಪ್ಸ್... ಅದಕ್ಕೂ ನಾನೇ ಬೇಕು.ಯಾಕ್ರೀ ನಿಮ್ಮ ಶೋಕಿ ಮಸ್ತಿಗೆ ನನ್ನ ದುರುಪಯೋಗ ಮಾಡ್ಕೋತೀರಾ?ಅಂಗಡಿಯಲ್ಲಿ ನೋಡಿದರೆ ನನ್ನ ಬೆಲೆ ಗಗನಕ್ಕೆ ಏರಿದೆ.
ನೀಡ್ರೀ ಬಡಬಗ್ಗರಿಗೆ..ನನ್ನ ನೋಡಿ,ಬಾಯಲ್ಲಿ ನೀರೂರಿಸಿಕೊಂಡು ,ನನ್ನ ಕೊಳ್ಳಲಾಗದ ಕೆಲ ಬಡವರೂ ಇದಾರೆ.ಅವರಿಗೆ ಉಚಿತವಾಗಿ ನೀಡಿ.ನನ್ನ ತಿಂದು ಖುಷಿ ಪಡಲಿ.ಅದು ಬಿಟ್ಟು ಯಾರಿಗೂ ಸಲ್ಲದೇ ಕೇವಲ ನಿಮ್ಮ ಖುಷಿಗೋಸ್ಕರ ನಾನ್ಯಾಕೆ ಬೀದಿ ಕಸವಾಗಲಿ?
ಮರಿ ..ಆಗಿದ್ದರೆ ತಾಯ ಜೊತೆಯಲ್ಲಿ ಇರುತ್ತಿದ್ದೆ.ಮರಿ ಆಗದೇ ಆಹಾರ ಆದೆ.ಹೇಗಿದ್ದರೂ ಆಹಾರ ಆಗೇ ಆಗುತ್ತಿದ್ದೆ ಆ ಪ್ರಶ್ನೆ ಬೇಡ ಬಿಡಿ.ಅದೂ ಖುಷಿಯೇ ನನಗೆ. ಯಾಕೆಂದರೆ ಹಸಿವು ನೀಗಿಸುವ ಪುಣ್ಯದ ಕಾಯಕ ನನ್ನದು.ಆದರೆ ಯಾರ ಹಸಿವೂ ಇಂಗಿಸದೇ,ಬೀದಿ ಕಸವಾಗಿ ನಿಮ್ಮ ಕಾಲ್ತುಳಿತಕ್ಕೆ ಸಿಕ್ಕಿ ನರಳುವ ನರಕ ನನಗೆ ಖಂಡಿತ ಬೇಡ.ದಯವಿಟ್ಟು ಹೋಳಿ ರಂಗಿನ ಜೊತೆಯಲ್ಲಿ ನನ್ನ ಅನವಶ್ಯಕವಾಗಿ ಎಸೆದು ಹಾಳುಮಾಡಬೇಡಿ....ಏನಾದರೂ ಗಲಾಟೆ ಆದರೂ ಕೂಡ, ನನ್ನ ಎಸೆದು ಎಸೆದು ನೀವೇನೋ ಕೋಪ ತೀರಿಸ್ಕೋತೀರಾ..ಆದರೆ ನನ್ನ ಪರಿಸ್ಥಿತಿ ಬಗ್ಗೆ ಕಿಂಚಿತ್ ಯೋಚನೆ ಮಾಡಿದೀರಾ..ಇಲ್ಲ ಅಲ್ವಾ?ಹಾಗೆ ಹಾಳು ಮಾಡುವ ಬದಲು, ನನ್ನನ್ನು ಉಚಿತವಾಗಿ ಅವಶ್ಯಕತೆ ಇರುವವರಿಗೆ ಹಂಚಿರಿ.ನಿಮಗೆ ಒಳ್ಳೆಯ ಹೆಂಡತಿ, ಒಳ್ಳೆಯ ಮಕ್ಕಳು ಸಿಕ್ಕಾರು.ಭಗವಂತ ಅಷ್ಟ ಐಶ್ವರ್ಯ ನೀಡಿ ಹರಸಾನು.....ಪ್ಲೀಸ್... ದಯವಿಟ್ಟು, ನಿಮಗೆ ಕೈ ಮುಗಿದು ಓ ಸ್ವಾರಿ,ನನಗೆ ಮುಗಿಯಲು ಕೈ ಇಲ್ಲ ಅಲ್ವಾ?😢ಸರಿ,ಉರುಳುರುಳಿ ನಮಸ್ಕರಿಸುವೆ...ದಯವಿಟ್ಟು ನನ್ನ ಬೀದಿ ಕಸಮಾಡಬೇಡಿ.
ಇತಿ ನಿಮ್ಮ
ಕೋಳಿ ಮೊಟ್ಟೆ🙄
© All Rights Reserved