...

22 views

ನೆನಪಿನ ದೋಣಿಯಲಿ
ಭಾವ_ವರ್ಷ

ಬಿಂದು ~ ೧

ನೆನಪಿನ ದೋಣಿಯಲಿ

ತೇಲುತಲಿದೆ ಜೀವನದ ಕಡಲಲಿ
ಪಯಣ ನೆನಪಿನ ದೋಣಿಯಲಿ
ಸುಂದರ ಸ್ಮೃತಿಗಳು ಮೆಲುತಂಗಾಳಿ
ಕಹಿ ಘಟನೆಗಳವೋ ಸುಂಟರಗಾಳಿ

ಬಾಲ್ಯದ ಸುಂದರ ಸವಿ ಸ್ಮರಣೆಗಳು
ಮರುಕಳಿಸದೇಕೆ ಎನಿಸುವ ಕ್ಷಣಗಳು
ಎಂಥ ಚೆಂದ ಆ ನಿಶ್ಚಿಂತ ನಿರಾಳತೆ
ಬರಬಾರದೆ ಜೀವನದಿ ಮತ್ತೆ ಮತ್ತೆ

ಜಗವೆಲ್ಲ ಸುಂದರ ರಂಗು ರಂಗು
ಪ್ರೀತಿಯಲ್ಲಿ ಮೈಮರೆತ ಆ ಗುಂಗು
ಹದಿಹರೆಯದ ರಸಸಮಯ ಸುಗ್ಗಿ
ತನುಮನಗಳ ಓಲಾಟವದು ಹಿಗ್ಗಿ

ಹೊಣೆಗಾರಿಕೆ ಜವಾಬ್ದಾರಿ ಸಂಸಾರ
ನಡುಹರೆಯದ ಸಮಸ್ಯೆ ತಲೆಭಾರ
ತಿಣುಕಿ ಹೊರುವಾಗ ಎಲ್ಲರ ಬಾರ ಮುಗಿದುಹೋಯಿತೆಲ್ಲ ಎನಿಸಿ ನಿಸ್ಸಾರ

ಮುಸ್ಸಂಜೆಯ ಬಿಸಿಲಂತೆ ಮನೋಹರ
ವೃದ್ಧಾಪ್ಯದಲ್ಲಿ ಚಿಗುರಿದಂತೆ ಕೊನರು
ಸಂತೃಪ್ತ ನಗೆ ತಿಟ್ಹತ್ತಿ ತಿರುಗಿ ನೋಡಲು
ಶಾಂತ ಗಂಭೀರ ಮೆರೆದಿದೆ ಬಾಳ ಕಡಲು

ಸುಜಾತಾ ರವೀಶ್
೧೧.೧೧.೨೦೨೨

Related Stories