...

6 views

ತವಕದ ಗೆಳತಿ
ಯಾಕೋ ಮನಸ್ಸು
ಭಾರವಾದಾಗ ನಿಮ್ಮ‌ನೆನಪು
ಗಾಳಿಯಾಗಿ ಬಂದು ಹಗುರವಾಗಿಸುತಿದೆ

ಏಕಸ್ವರೂಪದ ಪ್ರೀತಿಯಾದರೂ
ಪ್ರೇಮೋಲ್ಲಾಸ ಉಕ್ಕಿದೆ
ಬರದ ನಾಡಲ್ಲಿ
ಹೂ ಗುಚ್ಚ ನಿರ್ಮಿಸಲು ಸ್ವಾದದ ಹೂವಿಲ್ಲ

ಬರಿ ಹಿಂದುಳಿದ ಹಣೆಪಟ್ಟಿಯ ಕೀರ್ತಿ ಆದರೂ
ಮುಂದುವರೆದವರಿಗೂ
ಕಮ್ಮಿಯಿಲ್ಲ ಎಂಬ ಛಲ ಬೀರಿದೆ
ಛಲವಾದಿಯಾದ ನಿನ್ನಾ ಚೈತನ್ಯ

ನಾರಿಯ ಮನದಾಳದ ಮಾತು
ದಾರಿ ಸುಗಮವಾಗಿಸಿದೆ
ದೂರ ಹೋದಷ್ಟು ಗಟ್ಟಿಯಾಗಿ ಸಮೀಪಿಸಿದೆ

ನಿನ್ನ ಆ ಚಿತ್ರನಾದದ ಸಂಗೀತದೂಟ
ಕಲರವಗೀತೆ ಹಾಡಿಸಿದೆ
ಸಿಡಿದೇಳುವ ತವಕದಲ್ಲೇ
ವಿಶ್ವಾಸದ ಬೇರು ಗಟ್ಟಿಯಾಗಿದೆ

ಗೆಳತಿ
ಒಮ್ಮೆ ಸಮಾಜದ ಖೊಟ್ಟಿತನವ ಸುಡು ಬಾ
ನಿನ್ನ ಘಟ್ಟಿತನದ ಹೋರಾಟದಲಿ
ನಲ್ಲನ ನುಡಿಗಳಿಗೆ ಆಕ್ರೋಶದ ಧ್ವನಿಯಾಗಿ
ಕಹಳೆಯನೂದಿ
ಬಡಿದೆಬ್ಬಿಸಲು ಮಲಗಿದವರ
© Mallikarjun Bhrungimath