...

12 views

ಬಾ ೨೦೨೧
ಬಾ ೨೦೨೧
ಕವಿತೆ ರಚನೆ;ಭೃಂಗಿಮಠ
ಬಾ ಬಾ ಹೊಸತನದ
ಕ್ಯಾಲೆಂಡರ್ ವರುಷವೇ
ನೊಂದ ಬೆಂದ ನೋವುಗಳಿಗೆ ಚೇತರಿಕೆ ತಾ
ಬಾ ಬಾ ೨೦೨೧

ವರುಷ ೨೦೨೦ ಕೊರೋನ ವೈರಾಣುವಿನ ಹೈರಾಣದಲ್ಲೆ ದಿಕ್ಕು ತಪ್ಪಿಸಿದೆ
ಸಮಾಜಸ ದಾರಿ ಸುಗಮತೆಯ ಶಕ್ತಿ ಯುಕ್ತಿ ತಾ
ಬಾ ಬಾ ೨೦೨೧

ಇಡೀ ವಿಶ್ವವೇ ಥರ ಥರ ನಡುಗಿಸಿದ ನಿನ್ನ ಹಿಂದಿನ ವರುಷದ ವಿಷದ ಕಾಲ ಸುಟ್ಟು
ಘಟ್ಟಿಯಾಗಿ ಆರೋಗ್ಯದ ಗುಟ್ಟು ತಾ
ಹೆಣಗಳ ರಾಶಿ ನೋಟ ಮರೆತು ಬಾ
ಬಾ ಬಾ ೨೦೨೧

ನಿರೀಕ್ಷೆಯಲ್ಲೇ ನಿನ್ನ ಸ್ವಾಗತಕೆ ನಿಂತಿಹದು
ಮನುಜಕುಲ ಜೀವಸಂಕುಲಕೆ ಒಳಿತು ಮಾಡುವ ಭರವಸೆಯ ತಾ
ಮತ್ತೆ ಮತ್ತೆ ಕೊರೋನಾ ಕರಾಳ ದಿನಗಳಿಲ್ಲದೇ ಸತ್ಯವಂತರಿಗೆ ಜಯಿಸುವ ಉದ್ದೇಶದೊಂದಿಗೆ ಬಾ
ಬಾ ಬಾ ೨೦೨೧

ಅಮ್ಮ ಅಪ್ಪ ಬಂಧು ಬಳಗ
ಅಣ್ಣ ತಮ್ಮ
ಅಕ್ಕ ತಂಗಿ
ಅತ್ತಿಗೆ ಸೊಸೆ
ಭಾವ ಮೈದುನ
ಅತ್ತೆ ಮಾವ ಸಂಬಂಧಗಳ ಬೆಸೆಯುವ ಬೆಸುಗೆ ತಾ
ಪರಸ್ಪೆ ನಂಬಿಕೆಯ ಕರುಣಿಸಿ ಬಾ
೨೦೨೧

ಎಲ್ಲೆಲ್ಲೋ ಉಳಿದು ದಿನಗಳ ಕಳೆದು
ಕೊರೋನಾ ಪಾಶಣಕ್ಕೆ ಸಿಲುಕಿ
ಮುಖವಿಲ್ಲದೇ ಹಾದಿ ಬೀದಿ ಪಾಲಾದ ಜನಕೆ ಆಶ್ರಯದ ಕಾಲ ತಾ
ಕಿಂಚಿತ್ತೂ ಆಕ್ರಂದನದ ಘಳಿಗೆ ಇಲ್ಲದೇ ಬಾ‌
ಬಾ ಬಾ ೨೦೨೧