...

20 views

ಅಮ್ಮನ ಮಡಿಲು

ಶಿರ್ಷಿಕೆ - *** ಅಮ್ಮನ ಮಡಿಲು***

ಮಮತೆಯ ಮಡಿಲು ಪ್ರೇಮದ ಕಡಲು
ಒಲವಿನ ಒರತೆ ಕಾರುಣ್ಯಭರಿತೆ
ನಿಷ್ಕಾಮ ಭಾವದ ಜಗನ್ಮಾತೆ
ನಿನ್ನ ಋಣ ತೀರಿಸಲಾದಿತೆ?

ನವಮಾಸ ಜತನದಿ ಪೊರೆದೆ
ಎದೆಹಾಲಿನ ರೂಪದಿ ಅಮೃತ ಎರೆದೆ
ಹಗಲಿರುಳು ನಿದ್ದೆಗೆಟ್ಟಿ ಲಾಲಿ ಹಾಡಿರುವೆ
ಅವಿರತ ಜೋಗುಳ ನೀ ತೂಗಿದೆ

ಹಕ್ಕಿಯ ತೋರುತ ತುತ್ತು ತಿನಿಸಿರುವೆ
ಆಡಿಬಂದಾಗ ಅಂಗಾಲು ತೊಳೆದಿರುವೆ
ಹೂಗಳರಳಿದ ಅಂಗಿಯನು ತೊಡಿಸಿ
ಬಣ್ಣಬಣ್ಣದ ಕನಸು ತುಂಬಿರುವೆ

ನಿನ್ನ ಕಣ್ಣ ಕನಸಲಿ ನಾ ತುಂಬಿರುವೆ
ನಿನ್ಮಾತು ಮನಸಲಿ ನಾ ನಿಂತಿರುವೆ
ನಿನ್ನ ಯೋಚನೆ ಯೋಜನೆ ನಾನಾಗಿರುವೆ
ನಿನ್ಮಾತ್ರ ನಿರ್ಲಿಪ್ತ ಭಾವದಿ ಬದುಕುವೆ

ನಿನ್ನ ಮಡಿಲು ಸ್ವರ್ಗಕ್ಕೂ ಮಿಗಿಲು
ಅಮ್ಮ ನಿನ್ಮಾತು ವೇದಕ್ಕೂ ಸಿಗದು
ಅಮ್ಮ ನಿ ತ್ಯಾಗ ಪ್ರೇಮದ ಗಣಿ
ನನ್ನ ಬಾಳಿನ ನಿ ಕೌಸ್ತುಭ ಮಣಿ


✍️ ಶ್ರೀಮತಿ ಮಾಧುರಿ ಎಸ್ ಕೆ
© Madhuri s k