...

14 views

ನದಿ ಮತ್ತು ನಾನು
ಒಂದು ಗೋಧೂಳಿ ಕಾಲ
ಕೆರೆಯ ದಂಡೆ ಎನ್ನ ದೇಗುಲ
ಮುಗಿಲೇ ಎನ್ನ ಭಗವಂತ
ನಡೆಯುವುದು ಹೀಗೊಂದು ಸಂವಾದ ಅಲ್ಲ ಅದು ವಾದ...
ಸರಿ ಏನು ದೇವ ನಿಂಗೊಂದು ನ್ಯಾಯ
ನನಗೊಂದು ನ್ಯಾಯ
ಶುರು ಆಯಿತು ಇಲ್ಲಿಂದ...
ಹರಿವ ನೀರಲಿ ಇಣುಕಿದಾಗ
ಮುಗಿಲ ಚಿತ್ರ ಇದ್ದಂತೆ...
ನಾ ನನ್ನ ನೋಡಲು
ನಾ ಇಲ್ಲ,ಕಾಣದಂತೆ....
ಆ ತೀರಕೆ ಈ ತೀರಕೆ
ಅಲೆದು ಸೋತೆ
ಬೆದರಿ ನಿಂತೆ
ನಾ ಸಿಗಲೆ ಇಲ್ಲ..
ಅದಾರ ಮುಖವೋ
ಬಂದು ಅಣುಕಿಸಿ ಕೇಕೆ ಹಾಕಲು
ಆಳುತ್ತಾ ಮತ್ತೇ ಹುಡುಕಿದೆ...
ಅದೇನು ವೊರೆ ಕೋರೆ
ಮುಖದ ತುಂಬ ವಿಚಿತ್ರ ಚಿತ್ರ..
ಬೆಚ್ಚಿ ತತ್ತರಿಸಿದಾಗ ಹಕ್ಕಿಯೊಂದು
ಕೂಗು ಹಾಕಿ ಗೂಡು ಸೇರಿತು..
ಕೆರೆಯ ತೀರವಲ್ಲ ಇದು
ಎನ್ನ ಭಾವಗೂಡಿದು..
ಹುಡುಕುವೆ ದಿನ ಕ್ಷಣ
ನದಿಯ ಆಳದಿ
ಮರೆಯಾದ ಅಸ್ಮಿತೆ ಯನ್ನ...