...

37 views

ಮೌನದ ರೋಧನೆ
*ಮೌನದ ರೋಧನೆ*
ಅತ್ತತ್ತು ಹಗುರಾಗುತ್ತಿದ್ದೇನೆ, ಕಂಬನಿಗಳ ಭಾರ ಹೊರಲಾಗುವುದಿಲ್ಲವೆಂದಲ್ಲ
ಹಾಡುವ ಚಕ್ಷುಗಳ ಚರಮ ಗೀತೆಯ ಕೇಳಲೆಂದು
ಅಶ್ರುಧಾರೆಯಲಿ ಮಿಂದೆದ್ದು ಸ್ವಚ್ವಗೊಂಡಿದ್ದೇನೆ ಕೊಳೆ ತೊಳೆಯಲೆಂದಲ್ಲ
ಕಳಂಕದ ನಂಟು ತನುವಿಗೆ ಅಂಟದಿರಲೆಂದು

ಭಾವಗಳ ಬಿತ್ತುತ್ತಿದ್ದೇನೆ, ತೆನೆ ತುಂಬಿದ ಫಸಲು ಪಡೆಯಲೆಂದಲ್ಲ
ಪ್ರೀತಿ ಬೀಜವು ಒಣಗಿ ಹೆಣವಾಗದಿರಲೆಂದು
ಕನಸುಗಳ ಕೊಲ್ಲುತ್ತಿದ್ದೇನೆ ಕೊಲೆಗಡುಕಿ ನಾನಾಗಬೇಕೆಂದಲ್ಲ
ಹೊಂಗನಸುಗಳ ಹೆಣೆವ ಕಂಗಳು ಅರಳುವ ಮುನ್ನವೇ ಬಾಡದಿರಲೆಂದು

ಗಹಗಹಿಸಿ ನಗುತ್ತಿದ್ದೇನೆ, ನರ್ತಿಸುವ ನಲಿವುಗಳ ಚೆಲ್ಲಾಟವನು ಕಂಡಲ್ಲ
ನೋವುಗಳ ಮೆಟ್ಟಿಲೇರಲು ಸೋತ ಕಾಲ್ಗಳಿಗೆ ಭರವಸೆ ತುಂಬಲೆಂದು
ಅಸುವನ್ನು ಚೆಲ್ಲುತ್ತಿದ್ದೇನೆ ಸತ್ತು ಸಾಧಿಸುವ ಹುಂಬತನದಿಂದಲ್ಲ
ಮರುಗಿ ಮರುಗಿ ಮಂಕಾಗಿ ಮೌನದಿ ರೋಧಿಸುವ ಮನಕೆ ಮುಕ್ತಿಯ ನೀಡಲೆಂದು

*✍🏻 ಅರ್ಚನಾ ಯಳಬೇರು*






#WritcoPoemPrompt122
Someone has asked you a question,
That feels far too personal,
It's only a first impression,
You might be completely wrong and irrational,