...

8 views

ಅನ್ನಬ್ರಹ್ಮ
ಬಾಗಿ ಒಳ, ಕೈಮುಗಿದು
ನೇಗಿಲೊಳ ನೆಲವಗೆದು
ತೂಗು ಪೈರಿನ ಬೀಜವ ಧರಣಿಗಿಟ್ಟಿಹೆನೊ ಹರಿಯೆ
ನೀಗಿನಿಲ್ಲೊ ನೀ ಅನ್ನವಳೆದು

ಅನ್ನಗುಳ ಬ್ರಹ್ಮನಾಗಿ
ನನ್ನ ಮನೆಗೆ ಬಾರೊ ನೆಡೆನೆಡೆದು ಜೋಗಿ
ಇನ್ನಿಲ್ಲದ ಹಸಿವನೀಗಿ
ನಿನ್ನನೆ ನಿಲ್ಲಿಸುವೆ ದಾಸೋಹಪಂಕ್ತಿ ತೇಗಿ

ನಿನ್ನನ್ನ ಧರೆಗೆ ತರಲು
ನನ್ನೆಲ್ಲ ಬೆವರ ಅಭಿಷೇಕಕೆ ಬಸಿದಿಡುವೆ ಸ್ವಾಮೀ...