...

11 views

ಕಲಿಯುಗದ ಮೂಲ.
ಯಾರದ್ದೋ ವೈಯಕ್ತಿಕ ವಿಚಾರಗಳ
ತಿಳಿಯುವ ಕುತೂಹಲವೇಕೆ ಮೂಢ.

ನಿನ್ನದೇ ಜಂಜಾಟ ಸಾವಿರ ಇದ್ದರು,
ಇಣುಕುವೆ ನೆರೆಮನೆಯ ಕಿಟಕಿಯಲಿ,
ಎಂತ ಭಂಡ ಬಾಳು ನೋಡ!

ಯಾರದ್ದೋ ಚಾರಿತ್ರ್ಯದ ಕುರಿತು ಮಾತನಾಡುವ ಮುನ್ನ,
ನಿನ್ನ ಚಾರಿತ್ರ್ಯವ ನೀ ಅರಿಯೊ ಮೂಢ.

ನಿನ್ನಕ್ಕ - ತಂಗಿಯರ ಅಂಕೆಯಲ್ಲಿಡಲಿಲ್ಲ,
ಜರಿಯುವೆಯ ಪರ ಸ್ತ್ರೀ ಕಂಡು ಮೂಢ!

ಜೊಲ್ಲು ಸುರಿಸುತ ಅಲೆವೆ  ಹೆಣ್ಣುಮಕ್ಕಳ ಹಿಂದೆ.
ನಾಯಿಗಿಂತಲು ಕಡೆ, ನಿನ್ನ ಬಾಳು ನೋಡ!

ಜ್ಞಾನಿ - ಮೌನಿಯ ತೊರೆದು, ಮಾತಿನಾ ಮೋಡಿಗೆ, ಬಲಿಯಾದ ಹೆಣ್ಣಿನ ಬಾಳು ನೋಡ.

ನಡು ರಾತ್ರಿ ರಸ್ತೆಯಲಿ ಕಾಮುಕರ ಕೈಯಲ್ಲಿ ನಲುಗಿ ಸತ್ತಿಹಳು ನೋಡ.

ತಿಳಿಯದಾಗಿದೆ ಅಸಲಿ - ನಕಲಿಯಾ ವ್ಯತ್ಯಾಸ, ತೋರಿಕೆಯ ಜಗದಲ್ಲಿ ಮೂಢ.

ಆಕರ್ಷಿಸುತ್ತಿರಲು ನಕಲಿ, ಮೌನವಾಗಿದೆ ಅಸಲಿ!
ಕಲಿಯುಗದ ಮೂಲ ಇದೇ ನೋಡ.

© ಮಂಜುನಾಥ್.ಕೆ.ಆರ್