...

7 views

ಪ್ರಕೃತಿಯ ಸೌಂದರ್ಯ
ಮೂಡಣದ ಸೂರ್ಯ ರಂಗೇರಿ ಬರುತಿರಲು

ಅರಿಶಿನ ಕುಂಕುಮದಿಂದ ಕೂಡಿದ ಕಿತ್ತಳೆಯಂತೆ ಕಾಣುತಿರಲು

ಹಕ್ಕಿಗಳು ಮೈದುಂಬಿ ಸುಪ್ರಭಾತ ಹಾಡುತಿರಲು

ಮಂಜಿನ ಹನಿಯು ಎಲೆಗಳಿಗೆ ಮುತ್ತಿಕ್ಕುತಿರಲು

ದುಂಬಿ ಹೂಗಳ ಮಧ್ಯೆ ಸರಸ ಸಲ್ಲಾಪ ನಡೆದಿರಲು

ಗಿಡಮರಗಳು ಸಂತಸದಿಂದ ಚಿಗುರೊಡೆಯಲು

ಕಾಡು ವನಗಳು ಹಚ್ಚ ಹಸಿರಿನಿಂದ ತುಂಬಿರಲು

ಈ ಮುಂಜಾನೆಯ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು

ಮನದಲ್ಲೇನೋ ಹೇಳಲಾಗದ ಉತ್ಸಾಹ ತುಂಬಿರಲು

ಇಂದು ನಾ ಕಂಡ ನನ್ನ ಮೊದಲ ಪ್ರಕೃತಿಯ ಭೇಟಿ ಇದು

ಪ್ರಕೃತಿಯ ಜೊತೆ ಇರುವ ಎಲ್ಲ ಜೀವಿಯ ರಾಶಿಯೂ ಧನ್ಯ 🙏

#manuthoughts #nature #kannadapoems #naturelover
© ✍🏻ಮನು (Manu )