ಮುಂಜಾನೆ (ಸೂರ್ಯೋದಯ)
ಹಿಂಜರಿಯುತು ದೀರ್ಘದಂಧಾಕಾರ
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ
ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ ಕೃಷ್ಣಮೇಘದ ಸಿಂಗಾರ
ಧರಣಿಯಲ್ಲಿ ತಂಗಾಳಿಯ ಪ್ರಸಾರ
ದಿನದ ಕಾರ್ಯಕ್ಕೆ ಸಜ್ಜಾದ ಭ್ರಮರ
ಕಂಗೊಳಿಸಿಹ ಕುಸುಮಗಳ ಕೇಸರ
ಎಲ್ಲೆಡೆ ಸೂರ್ಯರಶ್ಮಿಯ ಸಂಚಾರ
ಪ್ರಕಾಶಿಸುತಿಹ ಗ್ರಹಾಧಿಪತಿ ನೇಸರ
ನಡೆಸುತಿಹನು ರವಿ ನಿತ್ಯ ಸದಾಚಾರ
ಜಗದೊಳಿತಿಗೆ ಆಗಿಹುದು ಸದ್ವಿಚಾರ
ಅರ್ಪಿಸುವೆವು ನಿತ್ಯವೂ ನಮಸ್ಕಾರ
#ಮುಂಜಾನೆ #ಶುಭೋದಯ #poem #shayiri #ಕನ್ನಡಕವನ #ಸೂರ್ಯೋದಯ #sunrise #kavanamar
© ಗುಡ್ಗೆಪೋರ
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ
ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ ಕೃಷ್ಣಮೇಘದ ಸಿಂಗಾರ
ಧರಣಿಯಲ್ಲಿ ತಂಗಾಳಿಯ ಪ್ರಸಾರ
ದಿನದ ಕಾರ್ಯಕ್ಕೆ ಸಜ್ಜಾದ ಭ್ರಮರ
ಕಂಗೊಳಿಸಿಹ ಕುಸುಮಗಳ ಕೇಸರ
ಎಲ್ಲೆಡೆ ಸೂರ್ಯರಶ್ಮಿಯ ಸಂಚಾರ
ಪ್ರಕಾಶಿಸುತಿಹ ಗ್ರಹಾಧಿಪತಿ ನೇಸರ
ನಡೆಸುತಿಹನು ರವಿ ನಿತ್ಯ ಸದಾಚಾರ
ಜಗದೊಳಿತಿಗೆ ಆಗಿಹುದು ಸದ್ವಿಚಾರ
ಅರ್ಪಿಸುವೆವು ನಿತ್ಯವೂ ನಮಸ್ಕಾರ
#ಮುಂಜಾನೆ #ಶುಭೋದಯ #poem #shayiri #ಕನ್ನಡಕವನ #ಸೂರ್ಯೋದಯ #sunrise #kavanamar
© ಗುಡ್ಗೆಪೋರ