...

8 views

ಸ್ನೇಹವೆಂಬ ಸುಮ
ನಿಷ್ಕಲ್ಮಶ ಭಾವ ತುಂಬಿದ ಸ್ನೇಹಸೇತು ಬಂಧ
ಪ್ರೀತಿ, ಸಹನೆ ತುಂಬಿರುವ ಸಿಹಿ ಮಾತಿನ ಗಂಧ
ಭೇದ ಭಾವವಿಲ್ಲದ ಹೃದಯ ಸವಿಜೇನಿನಂತೆ ಚೆಂದ
ಸುಮದ ಘಮದಂತೆ ಸ್ನೇಹವು ಬಹು ಆನಂದ//

ಸ್ವಾರ್ಥತೆ ಇಲ್ಲದ ಸ್ನೇಹ ಎಂಬ ಸೇತುವೆ
ಕಷ್ಟ ಸುಖಗಳಿಗೆ ಹೆದರದೆ ಗಟ್ಟಿಯಾಗಿ ನಿಂತಿವೆ
ಜೀವಕ್ಕೆ ಜೀವ ಕೊಡುವ ಸ್ನೇಹವೊಂದು ಅದ್ಭುತವೆ
ಸ್ನೇಹವೆಂಬುದು ಮಿನುಗುವ ಬಂಗಾರದ ಒಡವೆ//

ನಾನು ನೀನೆಂಬ ಅಹಂಭಾವವಿಲ್ಲದ ಸ್ನೇಹವು
ಮನಸ್ಸನ್ನು ಅರ್ಥೈಸುವ ಮಧುರವಾದ ಸಂಬಂಧವು
ಕಡಲ ಮುತ್ತಂತೆ ಬೆಲೆ ಬಾಳುವ ಸಂಪತ್ತಿನ ಆಗರವು
ರಕ್ತ ಸಂಬಂಧವನ್ನು ಮೀರಿಸಿದೆ ಈ ಸ್ನೇಹಸೇತುವು//

ದೂರವಿದ್ದರೂ ಮನಸ್ಸನ್ನು ಸೆಳೆಯುವ ಜಾದುಗಾರ
ಭಾವನೆಗಳ ಜೊತೆ ಸ್ಪಂದನೆ ನಂಬಿಕೆಯ ಸೊಗಸುಗಾರ
ಗಳಿಸಿದ ಸ್ನೇಹವು ನಾವು ಅಳಿಯುವ ತನಕದ ಮೋಜುಗಾರ
ಪದಗಳಿಗೆ ಸಾಲದ ಸ್ನೇಹದ ಪ್ರೀತಿ ಬಹು ಸಿಂಗಾರ//

ಗೆಳೆತನ ಮೂಡಿಸುವುದು ಬಾಳಲ್ಲಿ ಆಶಾಕಿರಣ
ಬೇಕಾಗಿಲ್ಲ ಹಗೆತನ ನಮ್ಮ ಬಾಳೊಂದು ಸುಂದರ ಯಾನ
ಸ್ನೇಹದ ಪರಿಧಿಯೊಳಗೆ ಪ್ರೀತಿಯ ಅನುಭೂತಿಯ ಗಾನ
ಸ್ನೇಹ ಸೇತು ಗಟ್ಟಿಯಾಗಿದ್ದು ಸುಖವಾಗಿರಲಿ ನಮ್ಮೀ ಜೀವನ//