...

5 views

👬 ಮಕ್ಕಳೆ ರಾಷ್ಟ್ರದ ಸಂಪತ್ತು 👭
ಮಕ್ಕಳ ಮನಸು ಕಾಣಲಿ ಸುಂದರ ಕನಸು
ಮಕ್ಕಳ ಕನಸು ನಗುವಿನ ಮುಗ್ಧ ಮನಸು.!

ಮಕ್ಕಳು ನಮ್ಮ‌ ರಾಷ್ಟ್ರದ ಅಮೂಲ್ಯ ಸಂಪತ್ತು
ಪ್ರತಿಭೆಯ ಗುರುತಿಸಿ ಅಭಿನಂದಿಸಿ‌ ಯಾವತ್ತು.!

ಮಕ್ಕಳು ಅರಳುವ ಸುಂದರ ಹೂವುಗಳು
ಅರಳುವ ಮುನ್ನವೇ ಚಿವುಟದಿರಿ ಕನಸುಗಳು.!

ಮಕ್ಕಳಲ್ಲಿ‌ ಯೋಚಿಸುವ ಮನೋಭಾವ ಬೆಳಸಿ
ಆಸಕ್ತಿ ವಿಷಯಗಳಿಗೆ ನೀರೆರೆದು‌ ಪೋಷಿಸಿ.!

ಕಲಿಕೆಯಲ್ಲಿ ಪ್ರಶ್ನೆಯ‌ ಕುತೂಹಲ ಕೆರಳಿಸಿ
ಜ್ಞಾನದ ಅರಿವನ್ನು‌ ಬಾಲ್ಯದಲ್ಲಿ‌ ಮೂಡಿಸಿ.!

ಜೀವನದಲ್ಲಿ‌ ಕನಸು‌ ಕಾಣಲು‌ ಪ್ರೇರೇಪಿಸಿ
ಕಲಿಕೆಯ ಜೊತೆ ಮುಟ್ಟುವ ಗುರಿ ತಲುಪಿಸಿ.!

ಮಧುರ ಭಾವನೆಗಳನ್ನು ಒಲವಿಂದ ಪ್ರಚೋದಿಸಿ
ಕಾಣುವ ಕಲ್ಪನೆಯ‌‌ ಲೋಕವನ್ನ ಸೃಷ್ಟಿಸಿ.!

ಮನದ ಆಸೆಗಳನ್ನು‌‌‌ ಸಂದರ್ಭಕ್ಕೆ ನೆರವೇರಿಸಿ
ಮುಖಾಮುಖಿ‌‌ ವಿಚಾರ ವಿನಿಮಯ ಮಾಡಿಸಿ.!
...