...

18 views

ನನ್ನವಳು,❤️❤️
ಇಳಿಯ ಸಂಜೆಯಲಿ ಇಂಪಾಗಿ
ಹಂಪೆಯಲಿ ಕಲ್ಲಾಗಿ
ಕೃಷ್ಣೆಯ ಮಡಿಲ ಕೂಸಾಗಿ
ಅಕ್ಕರೆಯ ಚಲುವೆ ನೀನ್ನಲವೆ....

ಕೊಳಲ ಉಸಿರಿನ ಸ್ವರವು ನೀನಲ್ಲವೇ
ವೀಣೆಯ ತಂತಿ ಮೀಟಿದವಳಲ್ಲವೇ
ಸಕ್ಕರೆಯ ಗೊಂಬೇ ನೀನಲ್ಲವೇ
ಚಂದನದ ಚಲವು ನೀನಲ್ಲವೇ....

ಇಬ್ಬನಿಯ ಹನಿ ನೀನಲ್ಲವೇ
ಸಿಹಿ ಜೇನಿನ ಹನಿ ನೀನಲ್ಲವೇ
ರಸಿಕನ ಕಚಗುಳಿ ನೀನಲ್ಲವೇ
ಮುದ್ದಾದ ಮಲ್ಲಿಗೆ ಮೋಗದವಳು ನೀನಲ್ಲವೇ....

ಮರಳಿನ ಬಿಸಿಚಿಲುಮೆ ನೀನಲ್ಲವೇ
ತಂಪನೆಯ ತಣ್ಣೀರು ನೀನಲ್ಲವೇ
ಮಾತೊಳಗೆ ಮರಳು
ಮಾಡಿದವಳು ನೀನಲ್ಲವೇ
ನನ್ನ ಜೀವ ನೀನಲ್ಲವೇ
ಇಂತೀ ನಿನ್ನವ....❤️❤️
ನಿನ್ನೊಂದಿಗೆ ನನ್ನ ಬರಹಗಳ ಪಯಣ.....

© All Rights Reserved