...

6 views

ತೇಲಿಬಂದನು ಮತ್ತೆ ವಸಂತ
ತರುಲತೆಗೆ ಜೀವ ನೀಡುತ,
ತೇಲಿಬಂದನು ಮತ್ತೆ ವಸಂತ,
ಅರಳುವ ಹೂಗಳೂ ಅನಂತ,
ನಿಸರ್ಗದ ಪರಿಮಳ ಬೀರುತ.

ಹಕ್ಕಿಗಳ ಚಿಲಿಪಿಲಿ ನಾದದಲಿ,
ಇಂಪಾಗಿ ಹಾಡುವ ಗೀತೆಯಲಿ,
ಕೋಗಿಲೆ ಸುಸ್ವರದ ಕಂಠದಲಿ,
ಪ್ರಕೃತಿ ನಲಿದಿದೆ ಆನಂದದಲಿ.

ರಂಗು ರಂಗಿನ ಹೂದೋಟವಿದು,
ಬಣ್ಣದ ಚಿಟ್ಟೆಗಳ ಹಾರಾಟವಿದು,
ತಂಪಾದ ಗಾಳಿಯ ಗುಣವಿದು,
ದುಂಬಿಗಳು ಮಕರಂದ ಹೀರುವದು.

ಧರಿಣಿಯ ಸೌಂದರ್ಯದ ಮೊಗವಿದು,
ನವವಧುವಿನ ಶೃಂಗಾರದ ಸೊಬಗಿದು,
ಚಿಗುರಿದ ಕನಸುಗಳ ಕಾವ್ಯವಿದು,
ಸೃಷ್ಟಿಯ ಸಪ್ತಸ್ವರದ ನಲುಮೆಯಿದು.


ಶ್ರೀಪಾದ ಆಲಗೂಡಕರ✍️✍️
ಪುಣೆ
೨೭.೦೨.೨೦೨೩
© SripadAlgudkar ಕಾವ್ಯಶ್ರೀ