...

17 views

ತ್ರಿಲಿಂಗಿ
ಹುಟ್ಟಿದ್ದೆಲ್ಲರಂತೆ ಜಗದಿ ಬೆಳೆದಿದ್ದು ತಾಯ ಮಡಿಲಿನಲ್ಲಿ ತೊಟ್ಟಿದ್ದು ತಾನ್ ಹುಡುಗರ ಉಡುಗೆ ಬಯಸಿದ್ದು ತಾನ್ ತಂಗಿಯ ವಸ್ತ್ರ...
ಎಲ್ಲರಂತಿಹ ಬದುಕು ಉಸಿರಾಡಿದ್ದು ಇದೇ ಗಾಳಿ ಕುಡಿದದ್ದು ಇದೇ ಜಲ ಬೆಳೆದಿದ್ದು ಇಲ್ಲಿಯೇ ಬದುಕು ಮಾತ್ರ ನಿಮ್ಮಂತಲ್ಲ ತಾಯೇ ಹೊರದಬ್ಬಿದ್ದಳು ಆಚೆಗೆ ಅವಳೇ ಕಾಣದ ಹೊರ ಪ್ರಪಂಚದೆಡೆಗೆ..
ಹೆಣ್ಣುಡುಗೆಯ ಗಂಡೆಂದರೆಲ್ಲರು ಕಂಡವರೆಲ್ಲ ದೂರ ಹೋಗೂವರಷ್ಟೇ ತುತ್ತು ಊಟಕ್ಕು ಬೇಡಿ ತಿನ್ನುವ ಜೀವನ ಹಾಕಿದ ಬಿಡಿಗಾಸಿಗೆ ಕೇಳಲಾರದ ಪದ ಅರ್ಚನೆ..
ಹುಟ್ಟಿದ್ದು ನನ್ನ ತಪ್ಪೇ ಹುಟ್ಟಿಸಿದ ತಾಯೇ ಹೊರದಬ್ಬಿರಲು ಯಾರ್ ತಾನೆ ಸೇರಿಸುವರು ಹತ್ತಿರಕ್ಕೆ..
ಎಲ್ಲರಂತೊಂದು ಹೃದಯ ನಗು ನೋವ್ಗಳ ತಿಳಿಯುವ
ಮನಸ್ಸು ಎಲ್ಲವಿದ್ದರು ಕಂಡಿದ್ದೆಲ್ಲ ಅವಮಾನ ಅಪಮಾನದಿ ಸುಡುತಿಹ ಮನದೊಳಗಿನ ಹಸಿವಿನ ಬೆಂಕಿ ಆರಲೆಂದರೆ ನಾನೇ ಕೊನೆಯಾಗಬೇಕಷ್ಟೇ...
ಸಮಾಜದೆದುರು ಇದ್ದು ಇಲ್ಲದ ಮತಗಟ್ಟೆ ಮತದಾರನಷ್ಟೇ ಮತ್ತೆಲ್ಲಿ ತಾನೆ ಕಾಣಬಯಸುವರೆಲ್ಲ ದೇವಾಲಯದೊಳಗಿನ ನನ್ನದೇ ಪ್ರತಿರೂಪದಿ ಕೈಮುಗಿದು ನನ್ನ ಕಾಣಲು ಮೊಗ ತಿರುಗಿ ಹೋಗೂವರಷ್ಟೇ ಇದು ಎನಗೆ ನೀ ಕೊಟ್ಟ ಶಿಕ್ಷೆಯೋ ನನ್ನದೇ ಪಾಪವೋ ಪಾಪಿ ಜಗದಲೊಂದು ಇಂತಹ ಜೀವನವ ನೀಡಿ ಸಾಯಿಸದಿರು ಹೇ ಭಗವಂತ...
#kannada #kannadaquotes
#savyasachikannada #goodmorning



© ಸವ್ಯಸಾಚಿ ✍️