...

7 views

ಶೀರ್ಷಿಕೆ. :- ಒಲವಿನ ಉಡುಗೊರೆ ♦️
ಮುಗಿಲ ಮಲ್ಲಿಗೆಯ ಕಂಪು ಹರಡಿದೆ
ಮನದಲಿ ಸುಂದರ ಪ್ರತಿಬಿಂಬ ಮೂಡಿದೆ
ನಿನ್ನೊಲವಿನ ಮಳೆಯು ಹೃದಯ ಸೇರಿದೆ
ಮೌನದ ಪ್ರೀತಿಯ ಕವಿತೆಯಲಿ ಬರೆದಿದೆ

ಒಲವಿನ ಉಡುಗೊರೆ ಹೃನ್ಮನದಿ ಇಟ್ಟಿರುವೆ
ನಿನ್ನ ನೆನಪಾದಾಗ ತೆರೆದಿಟ್ಟು ನೋಡುತ್ತಿರುವೆ
ಭಾವನೆಯ ಭೃಂಗದಲಿ ಒಲವ ಪೋಷಿಸುತ್ತಿರುವೆ
ಜೀವನದ ಸಂಗಾತಿಯ ಮಾಲೆಯ ಜಪಿಸುತ್ತಿರುವೆ

ಬಾನ ಚಂದಿರನಂತೆ ಬೆಳದಿಂಗಳ ರಾತ್ರಿಯಲಿ
ಕೊಟ್ಟಿರುವೆ ತುತ್ತಿನಂತೆ ಮಳೆಗೆರೆದ ಮುತ್ತಿನಲಿ
ಭದ್ರವಾಗಿ ಬಚ್ಚಿಟ್ಟಿರುವೆ ನಿನ್ನಧರದ ಗೂಡಿನಲಿ
ಶ್ವೇತಾಂಬರಿಯ ಮೊಗವೆ ಹಾರಿಬಾ ಮೋಹದಲಿ

ಶ್ರೀಪಾದ ಆಲಗೂಡಕರ✍️♦️✍️
ಪುಣೆ♦️
© SripadAlgudkar ಕಾವ್ಯಶ್ರೀ