...

17 views

ನನ್ನ ಗೆಳೆಯಾ
ಮನದ ಮಾತುಗಳನ್ನಾಲಿಸಿ ದ್ವನಿ ಬೆರೆಸಿ ಮಾತಾಗಿ ಜೊತೆಯಾದೆ
ಮಾತಿನ ಮುತ್ತುಗಳ ಕಾಣಿಕೆಯಿತ್ತವನು
ಮನದಲ್ಲಿ ಧ್ವನಿಯಾದೆ ಗೆಳೆಯಾ

ಹೊಂಬೆಳಕ ಮೂಡಿಸಿದೆ ನನ್ನಲ್ಲಿ
ಹೊಸ ಬಗೆಯ ಕಿರುನಗೆಗೆ ನೀ ಕಾರಣವಾದೆ
ಹೊಸತನವ ತಂದವನು ನೀನು
ಓ ಕೇಳಿಲ್ಲಿ ಗೆಳೆಯಾ

ಕಳೆದು ಹೋಗಿದ್ದು ನಿಮಿಷ ನೀ
ದೂರಾಗಿ ಕಳೆದಂತಾಗಿದೆ ವರ್ಷ
ಕಳವು ಮಾಡಲಾಗದ ನೆನಪಿನ ಬುತ್ತಿ
ಕಟ್ಟಿಕೊಂಡಿಹೆನು ನಾನು ಗೆಳೆಯಾ

-ರಾಣಿ