
10 views
ಸಾಂತ್ವನ - 1
ಏನಾಗಿದೆ ನಿನಗೀದಿನ?
ಏನಾಯಿತು ನಿನಗೀಕ್ಷಣ?
ಯಾವ ಯೋಚನೆ ನಿನಗಾಗಿದೆ?
ಯಾವ ಯಾತನೆ ನಿನಗಾಯಿತು?.......
ಗೆದ್ದಾಗ ಹಿಗ್ಗದ ನೀನು
ಸೋತಾಗ ಕುಗ್ಗದ ನೀನೂ
ಯಾವ ಶೋಕದೆ ಹೇಗಾದೆಯೋ?
ಯಾರ ಮಾತಿಗೆ ಮೂಕನಾದೆಯೋ?.
ಸೋಲು ಗೆಲುವು ಸಹಜವೆಲ್ಲ
ಏಳು ಬೀಳು ನುಂಗಿ ನೀನು
ನಗುವನ್ನು ನೆನೆದು
ನೋವನ್ನು ಮರೆತು...........................
ಅನ್ಯರ ಮಾತಿಗೆ ಕಿವಿಕೊಡದೆ
ಜಗ್ಗದೆಯೆ ಕುಗ್ಗದೆಯೇ
ಅಂಜದೆ ಹಿಂಜರಿಯದೆ
ನಡೆಯುತಿರು ನೀನು
ಎಂದೆಂದಿಗೂ...................................
ನಿನಗೆ ಅಸಾಧ್ಯವು ಯಾವುದು
ಕೈಕಟ್ಟಿ ಕೂರದೆ ತೊಡೆ ತಟ್ಟಿ
ನಿಲ್ಲು ನೀನೀಗ
ನಿನಗಾಗಿ ಗೆಲುವು ಕಾದಿದೆ
ಮೌನ ಮುರಿದು ಮಾತನಾಡು...........
_____________________________
ಬೆಳಕೇ ಇರದ ಇರುಳಿನಂತೆ
ನಗುವೇ ಇರದ ಚಂದ್ರನಂತೆ
ಏನಾಗಿದೆ ನಿನಗೀದಿನ?
ಏನಾಯಿತು ನಿನಗೀಕ್ಷಣ?..................
ನೋವು ನಲಿವು ಒಂದೇಯೆಂದು
ಏರು ಪೇರು ಸಹಜವೆಂದು
ಏನೇ ಆದರೂ ಏನೇ ಬಂದರೂ
ಎಂದಿಗೂ ಎಂದೆಂದಿಗೂ
ಮುಂದೆಯೇ ಮುನ್ನುಗ್ಗು ನೀ.............
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಜಯವಿಲ್ಲ
ನೀರಿಗೆ ಜಾರುವ ಭಯವೇ?
ಬೆಂಕಿಗೆ ಸುಡುವ ಭಯವೇ?
ಬೆಟ್ಟಕೆ ಬೀಳುವ ಭಯವೇ?
ನಿನಗೆ ನಾಳೆಯ ಭಯವೇ?
ಎದ್ದೇಳು ಭಯವ ಬಿಟ್ಟು
ಮೈ ಕೊಡವಿ ಎದ್ದು ನಿಲ್ಲು..................
ಸೋಲೇ ಗೆಲುವಿನ ಮೆಟ್ಟಿಲು
ಏಳು ಎದ್ದೇಳು ಬಿದ್ದರೂ ಎದ್ದು
ಚೆಂಡಿನಂತೆ ಪುಟಿದೇಳು
ಸಂಕಟಕ್ಕೆ ನೀ ಕಂಟಕವಾಗಿ................
ಆದ ಗಾಯವು ಆರುವ ಮುನ್ನ
ಕಾಡಿದ ನೋವು ಅಳಿಯುವ ಮಾರ್ಗ
ಸ್ಥಿತಿಗತಿ ಬದಲಾಗದಿದ್ದರೆ
ಮನಸ್ಥಿತಿ ಬದಲಾಗಬೇಕಿದೆ................
© chethan_kumar
ಏನಾಯಿತು ನಿನಗೀಕ್ಷಣ?
ಯಾವ ಯೋಚನೆ ನಿನಗಾಗಿದೆ?
ಯಾವ ಯಾತನೆ ನಿನಗಾಯಿತು?.......
ಗೆದ್ದಾಗ ಹಿಗ್ಗದ ನೀನು
ಸೋತಾಗ ಕುಗ್ಗದ ನೀನೂ
ಯಾವ ಶೋಕದೆ ಹೇಗಾದೆಯೋ?
ಯಾರ ಮಾತಿಗೆ ಮೂಕನಾದೆಯೋ?.
ಸೋಲು ಗೆಲುವು ಸಹಜವೆಲ್ಲ
ಏಳು ಬೀಳು ನುಂಗಿ ನೀನು
ನಗುವನ್ನು ನೆನೆದು
ನೋವನ್ನು ಮರೆತು...........................
ಅನ್ಯರ ಮಾತಿಗೆ ಕಿವಿಕೊಡದೆ
ಜಗ್ಗದೆಯೆ ಕುಗ್ಗದೆಯೇ
ಅಂಜದೆ ಹಿಂಜರಿಯದೆ
ನಡೆಯುತಿರು ನೀನು
ಎಂದೆಂದಿಗೂ...................................
ನಿನಗೆ ಅಸಾಧ್ಯವು ಯಾವುದು
ಕೈಕಟ್ಟಿ ಕೂರದೆ ತೊಡೆ ತಟ್ಟಿ
ನಿಲ್ಲು ನೀನೀಗ
ನಿನಗಾಗಿ ಗೆಲುವು ಕಾದಿದೆ
ಮೌನ ಮುರಿದು ಮಾತನಾಡು...........
_____________________________
ಬೆಳಕೇ ಇರದ ಇರುಳಿನಂತೆ
ನಗುವೇ ಇರದ ಚಂದ್ರನಂತೆ
ಏನಾಗಿದೆ ನಿನಗೀದಿನ?
ಏನಾಯಿತು ನಿನಗೀಕ್ಷಣ?..................
ನೋವು ನಲಿವು ಒಂದೇಯೆಂದು
ಏರು ಪೇರು ಸಹಜವೆಂದು
ಏನೇ ಆದರೂ ಏನೇ ಬಂದರೂ
ಎಂದಿಗೂ ಎಂದೆಂದಿಗೂ
ಮುಂದೆಯೇ ಮುನ್ನುಗ್ಗು ನೀ.............
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಜಯವಿಲ್ಲ
ನೀರಿಗೆ ಜಾರುವ ಭಯವೇ?
ಬೆಂಕಿಗೆ ಸುಡುವ ಭಯವೇ?
ಬೆಟ್ಟಕೆ ಬೀಳುವ ಭಯವೇ?
ನಿನಗೆ ನಾಳೆಯ ಭಯವೇ?
ಎದ್ದೇಳು ಭಯವ ಬಿಟ್ಟು
ಮೈ ಕೊಡವಿ ಎದ್ದು ನಿಲ್ಲು..................
ಸೋಲೇ ಗೆಲುವಿನ ಮೆಟ್ಟಿಲು
ಏಳು ಎದ್ದೇಳು ಬಿದ್ದರೂ ಎದ್ದು
ಚೆಂಡಿನಂತೆ ಪುಟಿದೇಳು
ಸಂಕಟಕ್ಕೆ ನೀ ಕಂಟಕವಾಗಿ................
ಆದ ಗಾಯವು ಆರುವ ಮುನ್ನ
ಕಾಡಿದ ನೋವು ಅಳಿಯುವ ಮಾರ್ಗ
ಸ್ಥಿತಿಗತಿ ಬದಲಾಗದಿದ್ದರೆ
ಮನಸ್ಥಿತಿ ಬದಲಾಗಬೇಕಿದೆ................
© chethan_kumar
Related Stories
9 Likes
3
Comments
9 Likes
3
Comments